Sunday, May 26, 2024
Homeಸುದ್ದಿಕರಾವಳಿಉಡುಪಿ: ನಕಲಿ ಚಿನ್ನಾಭರಣ ಅಡವಿರಿಸಿ 20 ಲಕ್ಷ ರೂ. ವಂಚನೆ

ಉಡುಪಿ: ನಕಲಿ ಚಿನ್ನಾಭರಣ ಅಡವಿರಿಸಿ 20 ಲಕ್ಷ ರೂ. ವಂಚನೆ

ಉಡುಪಿ (ಸೆ.11) : ನಕಲಿ ಚಿನ್ನವನ್ನು ಅಡವಿರಿಸಿ ಒಟ್ಟು 20.62 ಲಕ್ಷರೂ.ಗಳನ್ನು ಸಾಲವಾಗಿ ಪಡೆದು ವಂಚಿಸಿರುವ ಘಟನೆ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಗಿರಿಯಲ್ಲಿರುವ ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರಿ ಸಂಘದಲ್ಲಿ ರಿಯಾಝ್ ಎಂಬವರು ಜು.17ರಿಂದ ಸೆ.2ರ ನಡುವೆ ಹಂತಹಂತವಾಗಿ ಒಟ್ಟು 527.8ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಒಟ್ಟು 20.62 ಲಕ್ಷರೂ.ಗಳನ್ನು ಸಾಲವಾಗಿ ಪಡೆದು ವಂಚಿಸಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ದೂರು ನೀಡಿದ್ದಾರೆ.

ಇನ್ನು ರಿಯಾಝ್ ಸೆ.5ರಂದು ತನ್ನ ಹೆಂಡತಿ ಹಾಗೂ ದಾವೂದ್ ಅಬೂಬಕ್ಕರ್ ಎಂಬವರೊಂದಿಗೆ ಕಾರಿನಲ್ಲಿ ಸೊಸೈಟಿಗೆ ಬಂದು ಎರಡು ನೆಕ್ಲೇಸ್ ಆಧಾರದಲ್ಲಿ ಸಾಲ ಕೇಳಿದಾಗ ಸಂಶಯಗೊಂಡ ಜಲೇಂದ್ರ ಕೋಟ್ಯಾನ್, ಸಂಘದ ಸರಾಫ್‌ರ ಮೂಲಕ ಆಭರಣವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿದ್ದು, ಆಗ ಆಪಾದಿತ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.‌ ಇದರಿಂದ ಸಂಶಯಗೊಂಡ ಅವರು, ಆತ ಹಿಂದೆ ಅಡವಿಟ್ಟ ಚಿನ್ನಾಭರಣ ಗಳನ್ನು ಸಹ ಪರೀಕ್ಷೆಗೊಳಪಡಿಸಿದಾಗ ಎಲ್ಲವೂ ನಕಲಿ ಎಂದು ಗೊತ್ತಾಗಿದ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News