Thursday, April 25, 2024
Homeಸುದ್ದಿಉಡುಪಿ : ಅಪಾರ್ಟ್ಮೆಂಟ್ ನಿಂದ ಬಿದ್ದು ಬಾಲಕ ಮೃತ್ಯು

ಉಡುಪಿ : ಅಪಾರ್ಟ್ಮೆಂಟ್ ನಿಂದ ಬಿದ್ದು ಬಾಲಕ ಮೃತ್ಯು

ಉಡುಪಿ : ಅಪಾರ್ಟ್ಮೆಂಟ್ ನಲ್ಲಿದ್ದ ಜೇನು ತೆಗೆಯುವುದನ್ನು ನೋಡುತ್ತಿದ್ದ ಬಾಲಕನೋರ್ವ ಮಹಡಿ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಕನ್ನರಪಾಡಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಪ್ರಸ್ತುತ ಉದ್ಯಾವರದಲ್ಲಿ ನೆಲೆಸಿರುವ ರೀನಾ ಮಂಡೆಲ್ ಎಂಬವರ ಮಗ ಆಶಿಕ್ (13) ಮೃತಪಟ್ಟ ಬಾಲಕ.
ಜೇನು ತೆಗೆಯುವ ಕೆಲಸ ಮಾಡಿಕೊಂಡಿರುವ ರೀನಾ ಮಂಡೆಲ್ ಅವರು ಮೂರು ದಿನದ ಹಿಂದೆ ಉಡುಪಿಗೆ ಬಂದು ತಮ್ಮ ಸಂಬಂಧಿಕರೊಂದಿಗೆ ಉದ್ಯಾವರದ ಚರ್ಚ್ ಹಿಂದುಗಡೆ ಟೆಂಟ್ ಹಾಕಿಕೊಂಡು ವಾಸ ಮಾಡಿಕೊಂಡಿದ್ದರು. ಕನ್ನರಪಾಡಿ ಜಯದುರ್ಗಾ ದೇವಸ್ಥಾನದ ಎದುರಿರುವ ಫ್ಲಾಟ್ ಒಂದರ ಅಪಾರ್ಟ್ಮೆಂಟ್ ಮಹಡಿಯಲ್ಲಿ ಇದ್ದ ಜೇನನ್ನು ಕಂಡು ಅದನ್ನು ತೆಗೆಯಲು ಫ್ಲಾಟ್ ನ ಮಾಲೀಕರ ಬಳಿ ಅನುಮತಿ ಕೇಳಿ ಜೇನು ತೆಗೆಯಲು ರೀನಾ ಮಂಡೆಲ್ ಅವರ ಮಗಳ ಗಂಡ ಅಕಾಶ ಹಾಗೂ ಅವರ ಅಕ್ಕನ ಮಗಳ ಗಂಡ ರೋಶನ್ ಜತೆಗೆ ಆಶಿಕ್ ಅಪಾರ್ಟ್ಮೆಂಟ್ ಗೆ ತೆರಳಿದ್ದರು.
ಬಳಿಕ ಆಕಾಶ ಮತ್ತು ರೋಶನ್ ರವರು ಅಪಾರ್ಟ್ಮೆಂಟ್ ಮೇಲೆ ಹೋಗಿ ಜೇನು ತೆಗೆಯುತ್ತಿರುವಾಗ ಮಹಡಿ ಮೇಲಿಂದ ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News