Wednesday, September 11, 2024
Homeಸುದ್ದಿರಾಜ್ಯಕನ್ನಡಿಗರ ಮನಸು ಗೆದ್ದ ಸಪ್ತ ಸಾಗರದಾಚೆ ಎಲ್ಲೋ; ಸಿನಿಮಾಗೆ ಪ್ರೇಕ್ಷಕರು ಕೊಟ್ಟ ಮಾರ್ಕ್ಸ್​​ ಎಷ್ಟು..?

ಕನ್ನಡಿಗರ ಮನಸು ಗೆದ್ದ ಸಪ್ತ ಸಾಗರದಾಚೆ ಎಲ್ಲೋ; ಸಿನಿಮಾಗೆ ಪ್ರೇಕ್ಷಕರು ಕೊಟ್ಟ ಮಾರ್ಕ್ಸ್​​ ಎಷ್ಟು..?

ಸ್ಯಾಂಡಲ್ವುಡ್ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೋಡಿ ಮಾಡ್ತಿದೆ. ಕನ್ನಡ ಕಲಾಭಿಮಾನಿಗಳು ಮನು ಮತ್ತು ಪ್ರಿಯಾರ ಪರಿಶುದ್ಧ ಪ್ರೇಮಕಾವ್ಯದ ಮೋಹಕ್ಕೆ ಒಳಗಾಗಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಪ್ರೇಕ್ಷಕರನ್ನ ಭಾವನಾತ್ಮಕವಾಗಿ ಕಟ್ಟಿ ಹಾಕಿದ್ದಾರೆ.

ಹೌದು, ಸಪ್ತ ಸಾಗರದಾಚೆ ಎಲ್ಲೋ ದೊಡ್ಡ ಜಾದೂ ಮಾಡ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪ್ರೇಕ್ಷಕರ ಹೃದಯ ಸ್ಪರ್ಶಿಸಿದ್ದು, ಥಿಯೇಟರ್ಗಳಲ್ಲಿ ಜಾದೂ ಮಾಡ್ತಿದೆ. ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದ್ದು, ಕನ್ನಡ ಆಡಿಯೆನ್ಸ್ ಪ್ರಿಯ ಮತ್ತು ಮನು ಪ್ರೀತಿಯ ಮೋಹಕ್ಕೆ ಒಳಗಾಗ್ತಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ ಎಮೋಷನಲ್ಲಿ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗ್ತಿದೆ. ಮನು ಮತ್ತೆ ಪ್ರಿಯಾಳ ಪರಿಶುದ್ಧ ಪ್ರೀತಿಗೆ ಮಾರು ಹೋಗ್ತಿದ್ದಾರೆ. ರಕ್ಷಿತ್ ಹಾಗೂ ರುಕ್ಮಿಣಿಯ ಅದ್ಭುತ ನಟನೆ ಭಾವನಾತ್ಮಕವಾಗಿ ನೋಡುಗರನ್ನ ಕಟ್ಟಿ ಹಾಕ್ತಿದೆ. ತುಂಬಾ ದಿನ ಆದ್ಮೇಲೆ ಕನ್ನಡದಲ್ಲೊಂದು ಅದ್ಭುತ ಪ್ರೇಮ ಕಾವ್ಯ ಬಂದಿದೆ ಅಂತ ಜನ ಖುಷ್ ಆಗಿದ್ದಾರೆ. ಜನರ ಈ ಪ್ರೀತಿ ಕಂಡು ಚಿತ್ರತಂಡವೂ ಫುಲ್ ಖುಷ್ ಆಗಿದೆ.

ಸಪ್ತ ಸಾಗರದಾಚೆ ಎಲ್ಲೋ ಇದು ಪ್ಯೂರ್ಲೀ ಲವ್ ಸ್ಟೋರಿ. ಹಾಗಂತ ರೊಮ್ಯಾನ್ಸ್ ಇಲ್ಲ, ಡುಯೆಟ್ ಇಲ್ಲ. ವಿಲನ್ಗಳಂತೂ ಇಲ್ಲವೇ ಇಲ್ಲ. ರಕ್ಷಿತ್ ಮತ್ತು ರುಕ್ಮಿಣಿಯ ನಟನೆ. ಸಿನಿಮಾದುದ್ದಕ್ಕೂ ಆವರಿಸುವ ಹಿನ್ನಲೆ ಸಂಗೀತ. ಅತಿ ಸೂಕ್ಷ್ಮ ಭಾವನೆಯನ್ನ ಕಣ್ಣಿನಲ್ಲಿ ತೋರಿಸಿದ ರೀತಿ. ಪ್ರೇವಿಗಳಿಬ್ಬರು ಮಾತನಾಡುವಾಗ ಸುತ್ತಮತ್ತಲಿನ ಪರಿಸರ ನಿಶ್ಯಬ್ದವಾಗುವ ಪರಿ. ಪಾತ್ರಗಳ ಅಸಹಾಯಕತೆ ಇದೆಲ್ಲವೂ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದು, ಥಿಯೇಟರ್ ತುಂಬುವಂತೆ ಮಾಡಿದೆ.

ರಕ್ಷಿತ್-ರುಕ್ಮಿಣಿ ಇಷ್ಟು ಇಷ್ಟ ಆಗೋಕೆ ನಿರ್ದೇಶಕ ಹೇಮಂತ್ ರಾವ್ ಕಾರಣ ಅನ್ನೋದನ್ನ ಮರೆಯುವಂತಿಲ್ಲ. ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಂತರ ರಕ್ಷಿತ್ ಜೊತೆ ಸಿನಿಮಾ ಮಾಡಿರುವ ಹೇಮಂತ್ ರಾವ್ ಮ್ಯಾಜಿಕ್ ಮಾಡಿದ್ದಾರೆ. ಸ್ಲೋ ಪಾಯಿಸನ್ ಥರಾ ನಿಧಾನವಾಗಿ ಪ್ರೇಕ್ಷಕರನ್ನ ಮನು ಮತ್ತೆ ಪ್ರಿಯಾಳ ಲೋಕಕ್ಕೆ ಕರೆದುಕೊಂಡು ಹೋಗಿ ಕಟ್ಟಿ ಹಾಕಿಬಿಡ್ತಾರೆ. ದಿನದಿಂದ ದಿನಕ್ಕೆ ಸಪ್ತ ಸಾಗರದ ಶೋಗಳು ಜಾಸ್ತಿ ಆಗ್ತಿದೆ. ಆಡಿಯೆನ್ಸ್ ಕೂಡ ಹೆಚ್ಚಾಗ್ತಿದ್ದಾರೆ.

ಇನ್ನು, ರಕ್ಷಿತ್ ಮತ್ತು ತಂಡವೂ ಬೆಂಗಳೂರಿನ ಹಲವು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಪ್ರೇಕ್ಷಕರ ಖುಷಿಯಲ್ಲಿ ಭಾಗಿಯಾಗ್ತಾ ಇದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಅಂದುಕೊಂಡಂತೆ ಗೆಲುವು ಸಾಧಿಸಿದೆ. ಈಗ ಎಲ್ಲರ ಚಿತ್ರ ಸೈಡ್ ಬಿ ಮೇಲೆ. ಮನು ಮತ್ತು ಪ್ರಿಯಾಳ ಕಥೆ ಏನಾಗುತ್ತೆ? ಇವರಿಬ್ಬರ ಪ್ರೀತಿ ಒಂದಾಗುತ್ತಾ? ಪರಿಶುದ್ಧ ಪ್ರೇಮಕ್ಕೆ ಗೆಲುವು ಸಿಗುತ್ತಾ ಅನ್ನೋದು ಈಗ ಎರಡನೇ ಅಧ್ಯಾಯ. ಅಕ್ಟೋಬರ್ 20ಕ್ಕೆ ಸೈಡ್ ಬಿ ರಿಲೀಸ್ ಆಗಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News