ವಿಧಾನಪರಿಷತ್ ನ ನೂತನ ಸದಸ್ಯರಾಗಿ ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಪ್ರಮಾಣ ವಚನ

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಉಮಾಶ್ರೀ, ಎಮ್ ಆರ್ ಸೀತಾರಾಮ್ ಮತ್ತು ಎಚ್. ಪಿ ಸುದಾಮ್ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು.





ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್. ಸೀತಾರಾಮ್ ಮತ್ತು ಮಾಜಿ ಐಆರ್ಎಸ್ ಅಧಿಕಾರಿ ಎಚ್ ಪಿ ಸುಧಾಮ್ ದಾಸ್ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನಾಮನಿರ್ದೇಶನ ಮಾಡಿದ್ದರು.

ಸೀತಾರಾಮ್ ಅವರನ್ನು ಶಿಕ್ಷಣತಜ್ಞ ಕೋಟಾದ ಅಡಿಯಲ್ಲಿ, ಉಮಾಶ್ರೀ ಅವರು ನಟಿಯಾಗಿ ನೀಡಿದ ಕೊಡುಗೆಗಾಗಿ ಮತ್ತು ದಾಸ್ ಅವರನ್ನು ಸಾಮಾಜಿಕ ಕಾರ್ಯಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

You cannot copy content from Baravanige News

Scroll to Top