ಬೀಳುವ ಮನೆಗೆ ಆಸರೆಯಾಗಿ ನಿಂತ ಹೇರೂರು ಫ್ರೆಂಡ್ಸ್ ಕ್ಲಬ್ ಬಂಟಕಲ್ಲು

ಉಡುಪಿ : 92ನೇ ಹೇರೂರು ಆಶಾಲತಾ ಆಚಾರ್ಯ ರವರ ಮನೆ ಬೀಳುವ ಹಂತದಲ್ಲಿದ್ದ ಸಂದರ್ಭದಲ್ಲಿ 92ನೇ ಹೇರೂರು ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಕ್ರಿಕೆಟ್ ಪಂದ್ಯಾಟ ನಡೆಸಿ ಅದರ ಉಳಿಕೆಯ ಹಣದೊಂದಿಗೆ ಮತ್ತು ದಾನಿಗಳ ಸಹಕಾರದಿಂದ ಬೀಳುವ ಹಂತದಲ್ಲಿದ್ದ ಮನೆಯನ್ನು ಸಮಗ್ರ ರೀತಿಯಲ್ಲಿ ದುರಸ್ತಿಗೊಳಿಸಿ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.



ಅಧ್ಯಕ್ಷ ರಾಜೇಶ್ ಜೋಗಿ, ಕಾರ್ಯದರ್ಶಿ ಕುಮಾರಿ ದೀಕ್ಷಾ ಮತ್ತು ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಸುಧೀರ್ ಹೇರೂರು ಇವರ ಮಾರ್ಗದರ್ಶನದಲ್ಲಿ ಈ ದುರಸ್ಥಿ ಕಾರ್ಯ ನಡೆದಿದ್ದು, ಪ್ರಾಸ್ತಾವಿಕ ಮಾತು ವಿಜಯ ಧೀರಜ್ ರವರು ನೀಡಿದರು. ಕಾರ್ಯಕ್ರಮವನ್ನು ದೀಪಕ್ ನಿರೂಪಿಸಿದರು.

ನೂತನವಾಗಿ ಉದ್ಘಾಟನೆಗೊಂಡ ಹೇರೂರು ಫ್ರೆಂಡ್ ಕ್ಲಬ್ ನ ಕನಸಿನ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ..

You cannot copy content from Baravanige News

Scroll to Top