ಚಲಿಸುತ್ತಿದ್ದ ಬಸ್ ನಿಂದ‌ ಬಿದ್ದು ಕಂಡಕ್ಟರ್ ಮೃತ್ಯು

ಮಂಗಳೂರು, ಆ 30: ಚಲಿಸುತ್ತಿದ್ದ ಬಸ್ ನಿಂದ‌ ಆಯಾತಪ್ಪಿ ಬಿದ್ದು ಕಂಡಕ್ಟರ್ ಮೃತಪಟ್ಟ ಘಟನೆ ನಗರದ ನಂತೂರು ಸರ್ಕಲ್ ಬಳಿ ಸಂಭವಿಸಿದೆ.

ಮೃತರನ್ನು ಈರಯ್ಯ(ಗುರು)(23) ಎಂದು ಗುರುತಿಸಲಾಗಿದೆ. ಮಂಗಳಾದೇವಿಯಿಂದ ಕಾಟಿಪಳ್ಳಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮಂಗಳವಾರ ಕೆಪಿಟಿ ಕಡೆಯಿಂದ ಆ್ಯಗ್ನೆಸ್ ಕಡೆಗೆ ಹೋಗುತ್ತಿದ್ದ ಸಿಟಿ ಬಸ್ ನಂತೂರು ಸರ್ಕಲ್ ದಾಟಿ ಮುಂದೆ ಹೋಗುವಾಗ ಬಸ್ ನ ಎದುರಿನ ಫುಟ್ ಬೋರ್ಡ್ ನಲ್ಲಿದ್ದ ಗುರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

You cannot copy content from Baravanige News

Scroll to Top