Thursday, May 2, 2024
Homeಸುದ್ದಿರಾಜ್ಯಇಸ್ರೋ ವಿಜ್ಞಾನಿಯ ಕಾರಿಗೆ ಕಲ್ಲೆಸೆತ – ಹಿಂಭಾಗದ ಗಾಜು ಪುಡಿ ಪುಡಿ

ಇಸ್ರೋ ವಿಜ್ಞಾನಿಯ ಕಾರಿಗೆ ಕಲ್ಲೆಸೆತ – ಹಿಂಭಾಗದ ಗಾಜು ಪುಡಿ ಪುಡಿ

ಬೆಂಗಳೂರು : ಇಸ್ರೋ ವಿಜ್ಞಾನಿಯ ಕಾರನ್ನು ಹಿಂಬಾಲಿಸಿ ಕಲ್ಲೆಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರತನಹಳ್ಳಿ ಮುಖ್ಯ ರಸ್ತೆಯಲ್ಲಿ ಆಗಸ್ಟ್‌ 24ರ ರಾತ್ರಿ 12:45ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ ಗೂಂಡಾಗಳು ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಹಿಂಬಾಲಿಸಿದ್ದಾರೆ. ಗೂಂಡಾಗಳು ಕಾರನ್ನು ತಡೆದು ನಿಲ್ಲಿಸಿ ಹಿಂಭಾಗದ ಗಾಜನ್ನು ಒಡೆದು ಹಾಕಿದ್ದಾರೆ.

ಈ ಘಟನೆಯ ಬಗ್ಗೆ ದೂರು ನೀಡಲು ಮುಂದಾದಾಗ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಎಕ್ಸ್‌ ಮೂಲಕ ಘಟನೆ ಹಂಚಿಕೊಂಡಿದ್ದಾರೆ. ಬಳಿಕ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News