Monday, April 22, 2024
Homeಸುದ್ದಿಪ್ರತಿಭಾ ಕಾರಂಜಿ : ಶಿರ್ವ ಹಿಂದೂ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಪ್ರತಿಭಾ ಕಾರಂಜಿ : ಶಿರ್ವ ಹಿಂದೂ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಶಿರ್ವ : ಹಿಂದೂ ಪ್ರೌಢ ಶಾಲೆ ಶಿರ್ವ ದ ವಿದ್ಯಾರ್ಥಿಗಳು ಕುತ್ಯಾರು ಸೂರ್ಯ ಚೈತನ್ಯ ಶಾಲೆಯಲ್ಲಿ ನಡೆದಿರುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಲ್ಲ ವಿವಿಧ ಸ್ಪರ್ಧೆಯಲ್ಲಿ ಸುಮಾರು 24 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಇದರಲ್ಲಿ ಶ್ರೀಗೌರಿ (ಜನಪದಗೀತೆ), ಐಶ್ವರ್ಯ (ಭರತನಾಟ್ಯ) , ದರ್ಶನ್ ( ಹಾಸ್ಯ ) ಇವರುಗಳು ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ . ಉಳಿದವರಲ್ಲಿ 7ದ್ವಿತೀಯ ಸ್ಥಾನ ಹಾಗೂ 4ತೃತೀಯ ಸ್ಥಾನ ಬಂದಿರುತ್ತದೆ .


ವಿದ್ಯಾರ್ಥಿಗಳಿಗೆ ಶ್ರೀ ಗಣೇಶ್ ಶೆಟ್ಟಿ , ಹಿಂದಿ ಶಿಕ್ಷಕರು ಹಾಗೂ ಶ್ರೀಮತಿ ಸುಪ್ರಿತಾ ಶೆಟ್ಟಿ ಇಂಗ್ಲಿಷ್ ಶಿಕ್ಷಕರು ಮಾರ್ಗದರ್ಶನ ನೀಡಿದ್ದು, ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು , ಶಿಕ್ಷಕ ವೃಂದ ಹಾಗೂ ಪೋಷಕರು ಶುಭವನ್ನು ಕೋರಿರುತ್ತಾರೆ .

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News