ಮಂಗಳೂರು, ಆ 28: ಸಾಮಾನ್ಯವಾಗಿ ಜನರು, ಅದ್ರಲ್ಲೂ ಮಹಿಳೆಯರು ಮೊಬೈಲ್ ಫೋನ್ ಹಿಂಬದಿ ಕವರ್ ನೊಳಗೆ ಕರೆನ್ಸಿ ನೋಟುಗಳು, ಚೀಟಿ, ನಾಣ್ಯಗಳು ಮತ್ತು ಕೀಗಳನ್ನು ಸುರಕ್ಷಿತ ಸ್ಥಳವೆಂದು ಇಟ್ಟುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಬಹಳ ಅಪಾಯಕಾರಿ ಎಂದು ಸೈಬರ್ ಕಾನೂನು ಮತ್ತು ಭದ್ರತಾ ತಜ್ಞ ಡಾ.ಅನಂತ್ ಪ್ರಭು ಜಿ ಹೇಳುತ್ತಾರೆ.
ಸೈಬರ್ ಕಾನೂನು ಮತ್ತು ಭದ್ರತಾ ತಜ್ಞ ಡಾ.ಅನಂತ್ ಪ್ರಭು ಜಿ ಮಾತನಾಡಿ, ಪರ್ಸ್ ಬದಲು ಅಗತ್ಯ ವಸ್ತುಗಳನ್ನು ಫೋನ್ ಕವರ್‌ನಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿಯಾಗಿದೆ, ಇದು ಜನರಿಗೆ ತಿಳಿದಿಲ್ಲ. ಸ್ಮಾರ್ಟ್ ಫೋನ್‌ಗಳ ನಿರಂತರ ಬಳಕೆ ಮತ್ತು ಚಾರ್ಜ್ ಮಾಡುವುದರಿಂದ ನಿಮ್ಮ ಫೋನ್ ಬಿಸಿಯಾಗಿ ಸ್ಪೋಟಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೊಬೈಲ್ ಫೋನ್ ಕವರ್‌ನಲ್ಲಿ ವಿಶೇಷವಾಗಿ ನೋಟುಗಳು ಅಥವಾ ಕರೆನ್ಸಿ ಸೇರಿದಂತೆ ದಹಿಸುವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು. ಏಕೆಂದರೆ ಮೊಬೈಲ್ ಚಾರ್ಚ್ ಮಾಡುವಾಗ ಕವರ್ ಹಿಂದುಗಡೆ ನೋಟುಗಳು ಬಿಸಿಯಾಗಿ ಅವುಗಳಿಗೆ ಬೆಂಕಿ ಹಿಡಿಯುವ ಸಾಧ್ಯತೆ ಹೆಚ್ಚು ಇರುತ್ತದೆ. ಏಕೆಂದರೆ ಕಾಗದದ ಹಣವು ಸೆಲ್ಯುಲೋಸ್ ಎಂಬ ಸುಡುವ ವಸ್ತುಗಳಿಂದ ಮಾಡಲ್ಪಟ್ಟಿದೆ. ಮತ್ತು ಫೋನ್ ಕವರ್ ಹಿಂಭಾಗದಲ್ಲಿ ಬಿಗಿಯಾಗಿದ್ದರೆ, ಫೋನ್ ಸ್ಫೋಟಗೊಳ್ಳಬಹುದು ಅಥವಾ ಫೋನ್ ಬಿಸಿಯಾಗಿ ಬೆಂಕಿ ಹಿಡಿದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
“ಅಲ್ಲದೆ, ಫೋನ್ ಕವರ್‌ಗಳ ಹಿಂದೆ ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಅಥವಾ ಮ್ಯಾಗ್ನೆಟಿಕ್ ಸ್ಟ್ರಿಪ್‌ಗಳನ್ನು ಹೊಂದಿರುವ ಯಾವುದೇ ಕಾರ್ಡ್‌ಗಳನ್ನು ಇಟ್ಟುಕೊಳ್ಳುವುದು ಸಹ ಒಳ್ಳೆಯದಲ್ಲ. ಫೋನ್‌ನಿಂದ ಮ್ಯಾಗ್ನೆಟಿಕ್ ಫೀಲ್ಡ್ ಸ್ಟ್ರಿಪ್‌ಗಳನ್ನು ಡಿಮ್ಯಾಗ್ನೆಟೈಸ್ ಮಾಡಬಹುದು ಮತ್ತು ಕಾರ್ಡ್‌ಗಳನ್ನು ನಿರುಪಯುಕ್ತವಾಗಿಸಬಹುದು” ಎಂದು ಅವರು ಹೇಳುತ್ತಾರೆ.
ನೀವು ಫೋನ್ ಕವರ್‌ನಲ್ಲಿ ಕೆಲವು ವಸ್ತುಗಳನ್ನು ಇರಿಸಿದರೆ ಅದು ಜನರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಹಣ ವಸ್ತುಗಳು ಬೇಕಾಗುವುದರಿಂದ ಮೊಬೈಲ್ ವಾಲೆಟ್ ಅನ್ನುವ ಪರ್ಸ್‌ನಲ್ಲಿ ಸಂಗ್ರಹಿಸುವುದು ಸೂಕ್ತ ಎನ್ನುತ್ತಾರೆ ಡಾ.ಪ್ರಭು.