ಶಕ್ತಿ ಯೋಜನೆ ವಿರೋಧಿಸಿ ಕರ್ನಾಟಕ ಬಂದ್; ಆ.30ರ ಗಡುವು ನೀಡಿದ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳು

ಬೆಂಗಳೂರು, ಆ 25: ಶಕ್ತಿ ಯೋಜನೆಯಿಂದಾಗುತ್ತಿರುವ ನಷ್ಟ ಭರಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆ.30ರ ಗಡುವು ನೀಡಿರುವ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಂತರದಲ್ಲಿ ಬಂದ್‌ ಸೇರಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ 32ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವು ಸಭೆ ಸೇರಿ ಈ ತೀರ್ಮಾನ ತೆಗೆದುಕೊಂಡಿದೆ. ಸರ್ಕಾರ ಆ.30ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಆ.31ರಂದು ಸಭೆ ಸೇರಿ ರಾಜ್ಯಾದಂತ ಬಂದ್‌ ಮಾಡುವುದಕ್ಕೆ ತೀರ್ಮಾನಿಸುವುದಾಗಿ ಎಚ್ಚರಿಕೆ ನೀಡಿದೆ.

‘ಶಕ್ತಿ’ ಯೋಜನೆ ಜಾರಿ ಬಳಿಕ ಸಂಕಷ್ಟಕ್ಕೆ ಸಿಲುಕಿಕೊಂಡದ್ದು, ರಾಜ್ಯ ಸರ್ಕಾರಕ್ಕೆ ನಷ್ಟ ಭರಿಸುವಂತೆ ಒತ್ತಾಯಿಸುತ್ತಿರುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯನ್ನು ಬಹಿಷ್ಕರಿಸಿತ್ತು.

Scroll to Top