Friday, March 1, 2024
Homeಸುದ್ದಿಯೂಟ್ಯೂಬ್‌ ನೋಡಿ ಪತ್ನಿಗೆ ಹೆರಿಗೆ ಮಾಡಲು ಹೋದ ಪತಿ; ಮುಂದೆ ನಡೆದಿದ್ದೇ ಬೇರೆ..!!

ಯೂಟ್ಯೂಬ್‌ ನೋಡಿ ಪತ್ನಿಗೆ ಹೆರಿಗೆ ಮಾಡಲು ಹೋದ ಪತಿ; ಮುಂದೆ ನಡೆದಿದ್ದೇ ಬೇರೆ..!!

ತಮಿಳುನಾಡಿನ ಕೃಷ್ಣಗಿರಿಯಲ್ಲಿ ಪತಿಯೊಬ್ಬ ಯೂಟ್ಯೂಬ್‌ ನೋಡಿ ಹೆರಿಗೆ ಮಾಡಿಸಲು ಹೋದ ಕಾರಣ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟಿರುವ ಘಟನೆ ನಡೆದಿದೆ.

ಪೋಚಂಪಲ್ಲಿ ಸಮೀಪದ ಪುಲಿಯಂಪಟ್ಟಿ ನಿವಾಸಿ (27) ಲೋಗನಾಯಕಿ ಮೃತ ಮಹಿಳೆ.

ಲೋಗನಾಯಕಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಪತಿ ಮಾದೇಶ್ ಯೂಟ್ಯೂಬ್‌ ನೋಡಿಕೊಂಡು ಹೆರಿಗೆ ಮಾಡಿಸುವ ವಿಧಾನವನ್ನು ಅನುಸರಿಸಿದ್ದಾರೆ. ನೈಸರ್ಗಿಕವಾಗಿ ಹೆರಿಗೆಗೆ ಪ್ರಯತ್ನಿಸಿದ ವೇಳೆ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟಿದ್ದಾರೆ.

ಕರುಳು ಬಳ್ಳಿಯನ್ನು ಸರಿಯಾಗಿ ಕತ್ತರಿಸದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿದೆ. ಆ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News