ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದ ಮೊದಲ ದೇಶ ಭಾರತ: ಖಗೋಳಶಾಸ್ತ್ರಜ್ಞ ಅತುಲ್ ಭಟ್

ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿದಿರುವುದು ಬಹಳ ದೊಡ್ಡ ಹೆಜ್ಜೆಯಾಗಿದೆ.

ಇದರಿಂದ ನಮ್ಮ ವಿಜ್ಞಾನಿಗಳು ಪ್ರಬಲ ಎಂಬುದು ಸಾಬೀತಾಗಿದೆ. ಚಂದ್ರಯಾನ- 1ರಲ್ಲಿ ಚಂದ್ರ ಮೇಲೆ ನೀರು ಇದೆ ಎಂಬುದು ಪತ್ತೆ ಹಚ್ಚಿದ ಮತ್ತು 3ರಲ್ಲಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದಿರುವುದು ಇಸ್ರೋ ಮತ್ತು ಭಾರತ ಮೊದಲು ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ಹೇಳಿದ್ದಾರೆ.


ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಈವರೆಗೆ ಯಾವುದೇ ದೇಶ ಇಳಿದಿಲ್ಲ. ಈ ಪ್ರದೇಶದಲ್ಲಿ ಇಳಿದ ಮೊದಲ ದೇಶ ಭಾರತ ಆಗಿದೆ ಎಂದರು.

Scroll to Top