ಯಶಸ್ವಿಯಾಗಿ ಶಶಿಯ ಅಂಗಳ ತಲುಪಿದ ಪ್ರಜ್ಞಾನ್ ರೋವರ್; ಉಡುಪಿ ನಗರದಲ್ಲಿ ಭಾರೀ ಸಂಭ್ರಮಾಚರಣೆ

ಉಡುಪಿ, ಆ.23: ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ತಲುಪಿದ ಪ್ರಜ್ಞಾನ್ ರೋವರ್ ಈ ಹಿನ್ನೆಲೆ
ಉಡುಪಿ ನಗರದಲ್ಲಿ ಭಾರೀ ಸಂಭ್ರಮಾಚರಣೆ ನಡೆಯಿತು

ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ ನಡೆಯಿತು.

ಬೃಹತ್ ರಾಷ್ಟ್ರಧ್ವಜದೊಂದಿಗೆ ಜನರು ಕುಣಿದು ಕುಪ್ಪಳಿಸಿದರು. ನೂರಾರು ಸಾರ್ವಜನಿಕರಿಗೆ ಮೈಸೂರ್ ಪಾಕ್ ವಿತರಿಸಲಾಯಿತು.

ನಾಸಿಕ್ ಬ್ಯಾಂಡ್ ಚೆಂಡೆ ಪಟಾಕಿ ಸೇರಿಸಿ ಸಂಭ್ರಮಾಚರಿಸಿದರು.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸಂಭ್ರಮಾಚರಣೆ ಆಯೋಜಿಸಿದ್ದರು.

You cannot copy content from Baravanige News

Scroll to Top