Wednesday, September 18, 2024
Homeಸುದ್ದಿಕರಾವಳಿ2047ರ ವೇಳೆಗೆ ಭಾರತ ಸೂಪರ್ ಪವರ್ ರಾಷ್ಟ್ರ- ಸಚಿವೆ ಶೋಭಾ ಕರಂದ್ಲಾಜೆ

2047ರ ವೇಳೆಗೆ ಭಾರತ ಸೂಪರ್ ಪವರ್ ರಾಷ್ಟ್ರ- ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : 2047ರ ವೇಳೆಗೆ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಪ್ರದಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದ್ದು ಇದಕ್ಕೆ ವಿದ್ಯಾರ್ಥಿಗಳ, ಯುವಜನತೆಯ ಪರಿಶ್ರಮ, ಕೊಡುಗೆ ಅಪಾರ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಂವಹನ ಇಲಾಖೆ ಮಂಗಳೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಪೂರ್ಣಪ್ರಜ್ಞ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಬಡವರ ಕಲ್ಯಾಣ, ಪ್ರಧಾನ ಮಂತ್ರಿ ಮಿಷನ್ ಫಾರ್ ಇಂಡಿಯಾ-2047, ಕೇಂದ್ರ ಸರ್ಕಾರದ ಯೋಜನೆಗಳು, ಪಿ.ಎಂ ಪ್ರಣಾಮ್ ಹಾಗೂ ಏಕ ಭಾರತ ಶ್ರೇಷ್ಠ ಭಾರತ, ಕುರಿತು ಪಿಪಿಸಿ ಅಡಿಟೋರಿಂ ನಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಛಾಯಾ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ೯ ವರ್ಷಗಳ ಕೇಂದ್ರದ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಪ್ರದಾನಿ ಮೋದಿಯವರು ಕೃಷಿಗೆ ಸಂಬಂಧಿಸಿ, ಕೈಗಾರಿಗೆ ಹೀಗೆ ಅನೇಕ ಇಲಾಖೆಗಳ ಸಭೆ ಮಾಡ್ತಾರೆ ಆದ್ರೆ ಎಲ್ಲಿಯೂ ಅವರು ರಾಜಕೀಯದ ಬಗ್ಗೆ ಮಾತನಾಡದೆ ೨೦೪೭ರ ಹೊತ್ತಿಗೆ ಕೃಷಿ ಕ್ಷೇತ್ರ ಯಾವ ಹೊಸ್ತಿಲಲ್ಲಿ ಇರಬೇಕು ಎನ್ನುವುದರ ಬಗ್ಗೆ ಯೋಚನೆ, ಯೋಜನೆ ಬಗ್ಗೆ ಮಾತನಾಡುತ್ತಾರೆ. ಇಂತಹ ಪ್ರದಾನಿ ಸಿಕ್ಕ ಭಾರತೀಯರೇ ಧನ್ಯರು.೨೦೪೭ರ ಹೊತ್ತಿಗೆ ಭಾರತ ಸೂಪರ್ ಪವರ್ ಆಗಬೇಕು ಎಂದು ಪ್ರದಾನಿ ಮೋದಿಯವರು ಸಂಕಲ್ಪ ಮಾಡಿ ಮುಂದಡಿ ಇಡುತ್ತಿದ್ದಾರೆ . ಇವರ ಈ ಸಂಕಲ್ಪಕ್ಕೆ ನೀವೂ ಸಹ ಕೈ ಜೋಡಿಸಿ ಅಂತ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಸಕ ಯಶಪಾಲ್ ಸುವರ್ಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ, ಕೇಂದ್ರ ಸಂವಹನ ಇಲಾಖೆ ಇದರ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕಾರಾಮ ಗೌಡ ಉಪಸ್ಥಿತರಿದ್ದರು.

ಕೇಂದ್ರ ಸರಕಾರದ ಸಾಧನೆಗಳ ಕುರಿತು ಛಾಯಾ ಚಿತ್ರ ಪ್ರದರ್ಶನ ಹಾಗೂ ಕೈಮಗ್ಗ ಸೀರೆ, ಸಾಂಪದಾಯಿಕ ಶೈಲಿಯ ಬುಟ್ಟಿಗಳ ಪ್ರದರ್ಶನ ಜರಗಿತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News