Wednesday, September 18, 2024
Homeಸುದ್ದಿರಾಜ್ಯ'ಪ್ರಕಾಶ್ ರಾಜ್ ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯವಿಲ್ಲ' - ಸಚಿವೆ ಶೋಭಾ

‘ಪ್ರಕಾಶ್ ರಾಜ್ ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯವಿಲ್ಲ’ – ಸಚಿವೆ ಶೋಭಾ

ಉಡುಪಿ : ನಟ ಪ್ರಕಾಶ್ ರಾಜ್ ಅವರು ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ ಕಿಡಿ ಕಾರಿದ್ದಾರೆ.


ಚಂದ್ರಯಾನದ ಕುರಿತು ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಂಜೆ, ಪ್ರಕಾಶ್ ರಾಜ್ ಭಾರತವನ್ನು ಪ್ರೀತಿಸಲ್ಲ. ಭಾರತದ ವಿಚಾರವನ್ನು ಪ್ರೀತಿಸಲ್ಲ ಅವರಿಗೆ ಭಾರತದ ದುಡ್ಡು ಮಾತ್ರ ಬೇಕು, ಆದರೆ ಮನಸ್ಸು ಬೇರೆಲ್ಲೋ‌ ಇದೆ. ಅವರ ಮನಸ್ಸು ಎಲ್ಲಿದೆಯೋ ಅಲ್ಲೆ ಅವರು ಹೋದರೆ ಅಲ್ಲಿ ಅವರು ಇನ್ನಷ್ಟು ಶಾಂತಿಯಿಂದ ಇರಬಹುದು ಎಂದರು.

ಇನ್ನು ಪ್ರಕಾಶ್ ರಾಜ್ ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯ ಇಲ್ಲ. ಇದಕ್ಕಾಗಿ ಚಂದ್ರಯಾನ ದಂತಹ ವಿಚಾರವನ್ನು ಕೂಡಾ ಗೇಲಿ ಮಾಡುತ್ತಿದ್ದಾರೆ. ಇದು ನಮ್ಮ ವಿಜ್ಞಾನಿಗಳಿಗೆ, ಭಾರತಕ್ಕೆ ಮಾಡುತ್ತಿರುವ ಅಪಮಾನ. ಬೇರೆ ಬೇರೆ ದೇಶಗಳು ನಮಗೆ ಶುಭ ಹಾರೈಕೆ ಮಾಡುತ್ತಿವೆ. ಇಂತಹ ಸಂಧರ್ಭದಲ್ಲಿ ನಮ್ಮದೇ ದೇಶದಲ್ಲಿ ನಮ್ಮ ನೀರು, ಗಾಳಿ, ಅನ್ನ ತಿನ್ನುವವರು ಇದಕ್ಕೆ ಅಪಹಾಸ್ಯ ಮಾಡುತ್ತಾರೆ ಎಂದರೆ ಅವರು ಯಾವ ಸ್ಥಾನದಲ್ಲಿ ಇದ್ದಾರೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News