Monday, April 22, 2024
Homeಸುದ್ದಿಚಂದ್ರಯಾನ-3 ಯಶಸ್ಸಿಗೆ ಎಲ್ಲೆಡೆ ಹಾರೈಕೆ

ಚಂದ್ರಯಾನ-3 ಯಶಸ್ಸಿಗೆ ಎಲ್ಲೆಡೆ ಹಾರೈಕೆ

ಬೆಂಗಳೂರು, ಆ 23: ಇಂದು ಸಂಜೆ ಬಾನಿನಂಚಿಗೆ ರವಿ ಜಾರುತ್ತಿದ್ದಂತೆ ಶಶಿಯಲ್ಲಿ ಭಾರತದ ಹೆಜ್ಜೆಗುರುತು ಮೂಡಿಸಲು ಕಾದು ಕುಳಿತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಇತಿಹಾಸ ಬರೆಯಲಿದ್ದಾರೆ.

ಇಸ್ರೋ ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನು ಉಡಾವಣೆ ಮಾಡಿದ್ದು ಸುದೀರ್ಘ 40 ದಿನಗಳ ಕಾಲ ಅದರ ಚಲನವಲನವನ್ನು ವೀಕ್ಷಿಸುತ್ತಾ ವಿಜ್ಞಾನಿಗಳು ಕುಳಿತಿದ್ದಾರೆ. ಚಂದ್ರಯಾನ -೩ ಶಶಾಂಕನ ಮೇಲ್ಮೈಯಿಂದ ಕೆಲವೇ ಕಿ.ಮೀ ದೂರದಲ್ಲಿದೆ.

ಭಾರತಿಯ ಕಾಲಮಾನದಂತೆ ಇಂದು ಸಂಜೆ 6.04ಕ್ಕೆ ಲ್ಯಾಂಡರ್‌ ಚಂದ್ರ ಸ್ಪರ್ಶ ಮಾಡಲಿದ್ದು ಚಂದ್ರ ಸ್ಪರ್ಶದ ನೇರ ಪ್ರಸಾರ ಸಂಜೆ 5.27 ಆರಂಭವಾಗಲಿದೆ.

ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್, ಈ ಅಟಿಟ್ಯೂಡ್ ಹೋಲ್ಡ್ ಫೇಸ್ ಮತ್ತು ಫೈನ್ ಬ್ರೇಕ್ ಹಂತದ ನಡುವೆಯೇ ನಿಯಂತ್ರಣ ತಪ್ಪಿ ಚಂದ್ರನ ಮೇಲೆ ಪತನವಾಗಿತ್ತು. ಹೀಗಾಗಿ ವೇಗ ಮತ್ತು ಭಂಗಿ ಈ ಎರಡು, ವಿಕ್ರಮ್ ಲ್ಯಾಂಡರ್ ಎದುರಿರುವ ಮಹಾನ್ ಸವಾಲುಗಳು. ವಿಕ್ರಮ ಸುರಕ್ಷಿತವಾಗಿ ಚಂದಮನ ಅಂಗಳವನ್ನ ತಲುಪಿದರೆ ಭಾರತಕ್ಕೆ ಐತಿಹಾಸಿಕ ಮೈಲಿಗಲ್ಲಾಗಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News