ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಗೃಹ ಸಚಿವ ಪರಮೆಶ್ವರ್ ಅವರು ಮುಗಿದ ಅಧ್ಯಾಯ ಹೇಳಿರುವುದು ಬಹಳಷ್ಟು ನೋವು ತಂದಿದೆ. ಪ್ರಕರಣದ ಕುರಿತು ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು .
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಚಿನ್ನದ ಸ್ಪೂನ್ ನಲ್ಲಿ ತಿಂದು ಬೆಳೆದವರು, ಅವರಿಗೆ ಜನರ ನೋವು ಅರ್ಥ ಆಗ್ತಿಲ್ಲ. ಸೌಜನ್ಯಳ ನ್ಯಾಯಕ್ಕಾಗಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿಯೂ ಹೋರಾಟ ನಡೆಯುತ್ತಿದೆ. ಸರಕಾರ ಕೂಡ ಜನರ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಸಿಎಂ ಸಿದ್ದರಾಮಯ್ಯನವರು ಪರಮೇಶ್ವರ್ ಅವರಿಗೆ ಬುದ್ಧಿ ಹೇಳಬೇಕು. ಈ ಪ್ರಕರಣವನ್ನು ಮರುತನಿಖೆಗೆ ಆದೇಶ ನೀಡಬೇಕು ಎಂದರು.