Monday, April 29, 2024
Homeಸುದ್ದಿಉಡುಪಿ ಜಿಲ್ಲೆಯಾದ್ಯಂತ ನಾಗರಪಂಚಮಿ‌ ಸಂಭ್ರಮ; ನಾಗದೇವರಿಗೆ ಹಾಲೆರೆದು ಭಕ್ತಿ ಸಮರ್ಪಣೆ

ಉಡುಪಿ ಜಿಲ್ಲೆಯಾದ್ಯಂತ ನಾಗರಪಂಚಮಿ‌ ಸಂಭ್ರಮ; ನಾಗದೇವರಿಗೆ ಹಾಲೆರೆದು ಭಕ್ತಿ ಸಮರ್ಪಣೆ

ಉಡುಪಿ ಜಿಲ್ಲೆಯಾದ್ಯಂತ ಇಂದು ನಾಗರಪಂಚಮಿ ಹಬ್ಬವನ್ನು ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ, ಮುಚ್ಚಿಲಕೋಡು, ಮಾಂಗೋಡು, ತಾಂಗೋಡು, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿಯ ವೆಂಕಟರಮಣ ದೇವಸ್ಥಾನ, ಮಠದಬೆಟ್ಟುವಿನ ಸಪರಿವಾರಕ ಶ್ರೀ ನಾಗಬ್ರಹ್ಮಸ್ಥಾನ, ಸಗ್ರಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ ಮೊದಲಾದ ಕಡೆ ತನು ಸಮರ್ಪಣೆ ಮಾಡಿ ನಾಗದೇವರಿಗೆ ಪೂಜೆ ಸಲ್ಲಿಸಲಾಯಿತು.

ಮಂಚಿಕೆರೆಯ ಶ್ರೀ ವಾಸುಖಿ ನಾಗಯಕ್ಷ ಸನ್ನಿಧಿಯಲ್ಲಿ ನಾಗರ ಪಂಚಮಿ ಸಂಭ್ರಮದಲ್ಲಿ ಭಕ್ತರಿಂದ ತನು ಸೇವೆ ನೆರವೇರಿತು.

ಈ ಹಿನ್ನೆಲೆಯಲ್ಲಿ ಮಣಿಪಾಲ ಮಂಚಿಕೆರೆಯ ಶ್ರೀ ವಾಸುಖಿ ನಾಗಯಕ್ಷ ಸನ್ನಿಧಿಯಲ್ಲಿ ಇಂದು ವಿಶೇಷ ಧಾರ್ಮಿಕ‌‌ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗಿನಿಂದಲೇ‌ ಭಕ್ತಿಭಾವದೊಂದಿಗೆ ನಾಗ ಸನ್ನಿಧಿಗೆ ಆಗಮಿಸಿದ ನೂರಾರು ಭಕ್ತರು, ನಾಗದೇವರಿಗೆ ತನು ಸೇವೆ ಅರ್ಪಿಸಿದರು.

ಪರ್ಕಳ ಪರೀಕ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದ ಹಿಂಬದಿಯಲ್ಲಿರುವ ನಾಗಸನ್ನಿಧಿಯಲ್ಲಿಕೂಡ ಹಿರೇಬೆಟ್ಟು ನೆಲ್ಲಿಕಟ್ಟೆಯ ಅರ್ಚಕರಾದ ಶ್ರೀಧರ್ ಭಟ್ ಅವರು ನಾಗಾರಾದನೆ ಪೂಜಾ ಕೈಂಕರ್ಯ ನೆರವೇರಿಸಿದರು.

ನಾಗಬನದ ಅರ್ಚಕರು ಭಕ್ತರು ತಂದ ಹಾಲು, ಸೀಯಾಳಗಳನ್ನು ದೇವರಿಗೆ ಅಭಿಷೇಕ ಮಾಡಿದರು. ಹೂವು, ಹಣ್ಣು, ಕೇದಿಗೆ, ಹಿಂಗಾರಗಳನ್ನು ದೇವರಿಗೆ ಅರ್ಪಿಸಿ ಪೂಜಾಕೈಂಕರ್ಯಗಳನ್ನು ನಡೆಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News