ಕಾರಾಗೃಹದಲ್ಲಿ ಜೈಲು ಹಕ್ಕಿಗಳಿಗೆ ರಾಜಾತಿಥ್ಯ; ಕೈದಿಗಳ ಬಳಿ ಇರೋ ವಸ್ತುಗಳನ್ನ ನೋಡಿ ದಂಗಾದ ಪೊಲೀಸರು

ಹಾಸನ ಜಿಲ್ಲಾ ಕಾರಾಗೃಹದ ಮೇಲೆ ತಡರಾತ್ರಿ ದಿಢೀರ್ ದಾಳಿ ನಡೆಸಿ 17 ಮೊಬೈಲ್‌ಗಳು, ಗಾಂಜಾ, ಬಿಡಿ, ಸಿಗರೇಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಸ್ಪಿ ಹರಿರಾಮ್ ಶಂಕರ್, ಎ‌ಎಸ್‌ಪಿ ತಮ್ಮಯ್ಯ ಹಾಗೂ ಇನ್ಸ್‌ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು ಕಾರಾಗೃಹದಲ್ಲಿ ಮೊಬೈಲ್, ಗಾಂಜಾ ಪೂರೈಕೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಹಾಸನ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ತಡರಾತ್ರಿ 60 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಜೈಲಿನೊಳಗೆ ಮೊಬೈಲ್‌ಗಳು, ಗಾಂಜಾ, ಬಿಡಿ, ಸಿಗರೇಟ್ ಪತ್ತೆಯಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇವೆಲ್ಲ ಜೈಲಿನ ಒಳಗೆ ನಿಷೇಧ ಇದ್ದರೂ ಯಾರು ಇವುಗಳನ್ನು ರವಾನೆ ಮಾಡಿದ್ದಾರೆ ಎಂಬುದು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ತಡರಾತ್ರಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮುಂಜಾನೆವರೆಗೂ ಜೈಲಿನ ಕೊಠಡಿಗಳಲ್ಲಿ ಶೋಧಕಾರ್ಯ ನಡೆಸಿದರು. ಜೈಲಿನಲ್ಲಿರುವ ಕೈದಿಗಳ ಬಳಿ ಮೊಬೈಲ್‌ಗಳು, ಗಾಂಜಾ, ಸಿಗರೇಟ್, ಬಿಡಿ ಪತ್ತೆಯಾಗಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

You cannot copy content from Baravanige News

Scroll to Top