Saturday, July 27, 2024
Homeಸುದ್ದಿಕರಾವಳಿಕರಾಟೆ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಗರಿಷ್ಠ ಅನುದಾನ ನೀಡುವಂತೆ ಉಸ್ತುವಾರಿ ಸಚಿವೆಗೆ ಮನವಿ

ಕರಾಟೆ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಗರಿಷ್ಠ ಅನುದಾನ ನೀಡುವಂತೆ ಉಸ್ತುವಾರಿ ಸಚಿವೆಗೆ ಮನವಿ

ಉಡುಪಿ : ಪ್ರವೀಣಾ ಕರಾಟೆ ಕ್ಲಬ್ ಪ್ರರ್ಕಳ ಇದರ ಕರಾಟೆ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಗರಿಷ್ಠ ಅನುದಾನದ ನೀಡುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.



ಮನವಿಗೆ ಸ್ಪಂದಿಸಿದ ಹೆಬ್ಬಾಳ್ಕರ್ ರವರು ತಕ್ಷಣ ಕ್ರೀಡಾಇಲಾಖೆಯ ಮೂಖಾಂತರ ಪ್ರರ್ಕಳ ಹೈಸ್ಕೂಲ್ ಬಳಿ ,ಸುರಕ್ಷಾ ಸಭಾ ಭವನದ ಎದುರು ನೂತನ ವಾಗಿ ಕಟ್ಟಡನಿರ್ಮಾಣ ಗೊಳ್ಳಲಿರುವ, ನೂತನ ಕಟ್ಟಡಕ್ಕೆ ಸುಮಾರು 20ಲಕ್ಷ ಬಿಡುಗಡೆಗೆ ಸಂಬಂಧ ಪಟ್ಟ ಕ್ರೀಡಾ ಇಲಾಖೆಯ ಮೂಲಕ ಮಂಜೂರು ಮಾಡಲು ತಕ್ಷಣ ಕ್ರಮಕೈಗೊಂಡು ನಮ್ಮ ಮನವಿಗೆ ಸ್ಪಂದಿಸಿದ್ದಾರೆ.

ಈ ಕಟ್ಟಡ ಎರಡುಮಾಳಿಗೆ ಹೊಂದಿದ್ದು.ಅಂದಾಜು 45ಲಕ್ಷ ವೆಚ್ಚ ತಗಲಿದೆ, ಊರಾಹಾಗೂ ಪರವೂರಾ ಮತ್ತು ಪೋಷಕರ ಸಹಕಾರ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಈ ನೂತನಕಟ್ಟಡ ರೂಪುಗೊಳ್ಳಲಿದೆ. ಈಗಾಗಲೇ ಪೋಷಕರು 5 ಸೆಂಟ್ಸ್ ಜಾಗ ಉಚಿತವಾಗಿ ನೀಡಿದ್ದಾರೆ. ಎಂದು ಅಂತಾರಾಷ್ಟ್ರೀಯ ಕರಾಟೆ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ ಸುವರ್ಣ ರವರು ತಿಳಿಸಿದ್ದಾರೆ.

ಈ ಸಂದರ್ಭ ದಿಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭುಜಂಗ ಶೆಟ್ಟಿ. ಬ್ರಹ್ಮಾವರ, ಕಾಂಗ್ರೆಸ್ ನಾ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ, ಗಣೇಶ್ ಶೆಟ್ಟಿ ಕೀಳಂಜೆ.
ಗಣೇಶ್ ರಾಜ್ ಸರಳೇಬೆಟ್ಟು. ಮಹೇಶ್ ಮಣೆಪಾಲ ಹಾಗೂ ಕರಾಟೆಯ ವಿದ್ಯಾರ್ಥಿಗಳು ಜೊತೆಗಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News