ಮೂಡುಬಿದಿರೆ, ಆ.16: ಮೂಡುಬಿದಿರೆ ವಿದ್ಯಾಗಿರಿ ಬಳಿ ಇರುವ ಹಂಡೇಲು ತಿರುವು ಬಳಿ ಓಮ್ನಿ ಕಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಮೂಡುಬಿದಿರೆ ಅಗ್ನಿ ಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ವಾಹನದಲ್ಲಿದ್ದವರು ಹೊರಗೋಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಗ್ಯಾಸ್ ಸ್ಪೋಟಗೊಂಡು ಈ ಬೆಂಕಿ ಹಿಡಿದಿರಬೇಕೆಂದು ಶಂಕಿಸಲಾಗಿದೆ.