Saturday, July 20, 2024
Homeಸುದ್ದಿಶಿರ್ವ: ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಆಷಾಢ...

ಶಿರ್ವ: ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಆಷಾಢ ಸಂಭ್ರಮ ಕಾರ್ಯಕ್ರಮ

ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ) ಶಿರ್ವ ಮತ್ತು ಮಹಿಳಾ ಬಳಗದ ಆಷಾಢ ಸಂಭ್ರಮ ಕಾರ್ಯಕ್ರಮ ಹೋಟೆಲ್ ಮಂದಾರ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘ ಗಾಯತ್ರಿ ವೃಂದದ ಮಾಜಿ ಅಧ್ಯಕ್ಷರಾದ ಶ್ರೀಮತಿ ವಸಂತಿ ಅಶೋಕ್ ಆಚಾರ್ಯರು ಆಷಾಢ ಸಂಭ್ರಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ ಸಂಸ್ಕೃತಿ ಕಿರಿಯರಿಗೆ ನೀಡುವುದರ ಮೂಲಕ ಸಂಭ್ರಮ ಸಂಗಮವಾಗಿ ಬೆಳೆಯಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಿರ್ವ ನ್ಯೂ ಭಾರ್ಗವಿ ಜುವೆಲರ್ಸ್ ನ ಮಾಲಕರಾದ ಶ್ರೀಮತಿ ಸೌಮ್ಯ ಗಣೇಶ ಆಚಾರ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ಸುಮತಿ ಭಾಸ್ಕರಾಚಾರ್ಯ ಸಂಗಮದ ಗೌರವಾಧ್ಯಕ್ಷ ಶ್ರೀ ಸುರೇಶ ಆಚಾರ್ಯ ಅಧ್ಯಕ್ಷ ಉಮೇಶ್ ಆಚಾರ್ಯ ಕಾರ್ಯದರ್ಶಿ ಮಾಧವಾಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿ, ಕಾರ್ಯದರ್ಶಿ ಶ್ರೀಮತಿ ಪ್ರೀತಿ ಉಮೇಶ್ ಆಚಾರ್ಯ ಸ್ವಾಗತಿಸಿದರು, ಶ್ರೀಮತಿ ಮಂಜುಳಾ ಉಮೇಶ್ ಆಚಾರ್ಯ ಧನ್ಯವಾದ ನೀಡಿದರು.

ಶ್ರೀಮತಿ ಶರ್ಮಿಳ ಸದಾಶಿವಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಆಚಾರ್ಯ ಮತ್ತು ಶಶಿರಾಜ್ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News