Tuesday, April 16, 2024
Homeಸುದ್ದಿದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ ದಂಡ-ಕ್ರಮಕ್ಕೆ ಪೇಜಾವರ ಶ್ರೀ ಆಗ್ರಹ

ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ ದಂಡ-ಕ್ರಮಕ್ಕೆ ಪೇಜಾವರ ಶ್ರೀ ಆಗ್ರಹ

ಉಡುಪಿ : ಕೋಲಾರದ ಮಾಲೂರಿನಲ್ಲಿ ದಲಿತ ಬಾಲಕ ದೇವರನ್ನು ಮುಟ್ಟಿದ ಎಂದು ದಂಡ ವಿಧಿಸಿರುವುದು ಖೇದಕರ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದರು.

ಈ ಬಗ್ಗೆ ಶ್ರೀಗಳು ಮಾತನಾಡಿ, ಇಂತಹ ಘಟನೆಗಳನ್ನು ಯಾವ ಧರ್ಮ ಗ್ರಂಥಗಳೂ ಒಪ್ಪುವುದಿಲ್ಲ. ಉತ್ಸವ ಎಲ್ಲರಿಗೂ ಸಂಬಂಧಿಸಿದ್ದು. ಈ ರೀತಿ ಮುಟ್ಟಬಾರದು ಅನ್ನುವ ನಿಯಮಗಳಿಲ್ಲ.. ಎಲ್ಲರೂ ಸಮಾನರು. ವಿಶ್ವ ಹಿಂದೂ ಪರಿಷತ್ ಮೂಲಕ ಹಿಂದೂ ಧರ್ಮದ ಸಮಾನತೆಯ ಕೆಲಸದ ಮೂಲಕ ಒಗ್ಗೂಡಿಸುವ ಪ್ರಯತ್ನ ನಡೆದರೂ ಇನ್ನೂ ಜಾಗೃತಿ ಬಂದಿಲ್ಲ. ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಮಂಗಳೂರು – ಉಡುಪಿಯಲ್ಲೂ ಈ ರೀತಿ ಅನೇಕ ಘಟನೆಗಳು ನಡೆದಿದ್ದು, ಕೆಟ್ಟ ಘಟನೆಗಳಿಗೆ ಯಾರೂ ಪ್ರಚೋದನೆ ನೀಡಬಾರದು. ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಬೇಕು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News