Saturday, July 27, 2024
Homeಸುದ್ದಿಕರಾವಳಿಡಿವೈಡರ್ ಏರಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಕಾರು : ಸವಾರರಿಬ್ಬರಿಗೆ ಗಂಭೀರ ಗಾಯ..!

ಡಿವೈಡರ್ ಏರಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಕಾರು : ಸವಾರರಿಬ್ಬರಿಗೆ ಗಂಭೀರ ಗಾಯ..!

ಉಡುಪಿ: ಡಿವೈಡರ್ ಏರಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.



ಕಾಪು ತಾಲೂಕಿನ ಎರ್ಮಾಳ್ ನಿವಾಸಿ ಧೀರಜ್ ಮತ್ತು ಪವಿತ್ರ ದಂಪತಿ ಗಾಯಗೊಂಡವರು.

ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅವರು ಕೆಲಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News