Wednesday, May 22, 2024
Homeಸುದ್ದಿಬ್ರೈಟ್ ಗ್ರೂಪ್ ಫ್ರೆಂಡ್ಸ್(ರಿ.) ಸೂಡ ಮತ್ತು ಜನನಿ ಮಹಿಳಾ ಮಂಡಳಿ ಸೂಡ ಇವರ ಜಂಟಿ ಆಶ್ರಯದಲ್ಲಿ...

ಬ್ರೈಟ್ ಗ್ರೂಪ್ ಫ್ರೆಂಡ್ಸ್(ರಿ.) ಸೂಡ ಮತ್ತು ಜನನಿ ಮಹಿಳಾ ಮಂಡಳಿ ಸೂಡ ಇವರ ಜಂಟಿ ಆಶ್ರಯದಲ್ಲಿ ಸ್ವ ಉದ್ಯೋಗದ ಅವಕಾಶಗಳು ಮತ್ತು ರುಡ್ ಸೆಟ್ ಸಂಸ್ಥೆಯ ವಿವಿಧ ತರಭೇತಿಗಳ ಮಾಹಿತಿ ಕಾರ್ಯಾಗಾರ

ಉಡುಪಿ, ಆ.13: ಬ್ರೈಟ್ ಗ್ರೂಪ್ ಫ್ರೆಂಡ್ಸ್(ರಿ.) ಸೂಡ ಮತ್ತು ಜನನಿ ಮಹಿಳಾ ಮಂಡಳಿ ಸೂಡ ಇವರ ಜಂಟಿ ಆಶ್ರಯದಲ್ಲಿ, ಸ್ವ ಉದ್ಯೋಗದ ಅವಕಾಶಗಳು ಮತ್ತು ರುಡ್ ಸೆಟ್ ಸಂಸ್ಥೆಯ ವಿವಿಧ ತರಭೇತಿಗಳ ಮಾಹಿತಿ ಕಾರ್ಯಾಗಾರವು ಆ.13 ಭಾನುವಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂಡ ಇದರ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಕೆ ಕರುಣಾಕರ ಜೈನ್ ರವರು ಸ್ವ ಉದ್ಯಮ, ಸಂಪನ್ಮೂಲ ಕ್ರೋಡೀಕರಣ, ಬ್ಯಾಂಕ್ ಮತ್ತು ಇತರ ಮೂಲಗಳಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಮಾಹಿತಿ ಕಾರ್ಯಾಗಾರದ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನನಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮೀ ಆರ್ ಭಟ್ ರವರು ವಹಿಸಿದ್ದು, ಅತಿಥಿಗಳಾಗಿ ಬ್ರೈಟ್ ಗ್ರೂಪ್ ಫ್ರೆಂಡ್ಸ್(ರಿ.) ಸೂಡ ಇದರ ಅಧ್ಯಕ್ಷರಾದ ರವಿರಾಜ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂಡ ಇದರ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ, ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ರಜನಿ ಧ್ವಾರಕನಾಥ ಜೋಗಿ ಉಪಸ್ಥಿತರಿದ್ದರು.

ಕುಮಾರಿಯರಾದ ಕೀರ್ತನಾ ಮತ್ತು ಪ್ರಾರ್ಥನಾ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ದೀಪಿಕಾ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ನಳಿನಿ ಶಂಕರ್ ರುಡ್ ಸೆಟ್ ಸಂಸ್ಥೆಯಲ್ಲಿನ ತರಭೇತಿಯ ಬಗ್ಗೆ ಅನಿಸಿಕೆ ಹೇಳಿದರು.

ರವಿರಾಜ್ ರವರು ಸ್ವಾಗತಿಸಿ, ಶ್ರೀಮತಿ ಕವಿತಾ ಪ್ರದೀಪ್ ಧನ್ಯವಾದ ಸಮರ್ಪಿಸಿದರು. ಜೇರಿ ಎಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News