ಕುತ್ಯಾರು, ಆ.09: ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಮಂಗಳವಾರ ಮಾತೃ ವಂದನಾ ಕಾರ್ಯಕ್ರಮ ಸಂಪನ್ನಗೊಂಡಿತು.
ಮಾತೃ ವಂದನಾ ಕಾರ್ಯಕ್ರಮವನ್ನು ಪುರೋಹಿತರಾದ ಮೌನೇಶ್ ಶರ್ಮ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ, ವಿಧಾನಗಳಿಂದ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ಕುಮಾರ್ ಬೆಳ್ಳೂರು ವಹಿಸಿದ್ದರು.
ಮಾತೃ ವಂದನಾ ಕಾರ್ಯಕ್ರಮದ ಮಹತ್ವವನ್ನು ಲೋಲಾಕ್ಷರವರು ಸಮರ್ಪಕವಾಗಿ ತಿಳಿಸಿದರು.
ಶಾಲಾ ತ್ರೈಮಾಸಿಕ ಚೊಚ್ಚಲ ಪತ್ರಿಕೆ ಚೈತನ್ಯವಾಣಿಯನ್ನು ಬಿಡುಗಡೆ ಗೊಳಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷರಾದ ಶಂಭುದಾಸ್ ಗುರೂಜಿ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕೋಶಾಧಿಕಾರಿ ಸೂರ್ಯ ಕುಮಾರ್, ಕಾರ್ಯದರ್ಶಿಯಾದ ಗುರುರಾಜ್ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ್ ಆಚಾರ್ಯ, ಮಾತೃ ಮಂಡಳಿಯ ಅಧ್ಯಕ್ಷರಾದ ಲತಾ ಸಂತೋಷ್ ಮತ್ತು ಪದಾಧಿಕಾರಿಗಳು, ಶಿಕ್ಷಕರು, ಮಾತೆಯರು, ವಿದ್ಯಾರ್ಥಿಗಳು, ಹಾಗೂ ಪೋಷಕರು ಭಾಗಿಯಾಗಿದ್ದರು.
ಪ್ರಾಂಶುಪಾಲೆ ಸಂಗೀತಾ ಸ್ವಾಗತಿಸಿದರು. ಸುಧೀರ್ ಕಾರ್ಯಕ್ರಮವನ್ನು ನಿರೂಪಿಸಿದರು.
ತ್ರೈಮಾಸಿಕ ಪತ್ರಿಕೆಯ ಮಹತ್ವವನ್ನು ರಮ್ಯಾ ತಿಳಿಸಿದರು. ಮಂಜುನಾಥ ಶೇಟ್ ವಂದಿಸಿದರು.