Tuesday, April 16, 2024
Homeಸುದ್ದಿಉಡುಪಿ : ಖಾಸಗಿ ಬಸ್ ಗಳಲ್ಲಿ ಹಳೆ ದರವನ್ನೇ ಪಡೆಯಲು ಸಾರಿಗೆ ಇಲಾಖೆ ಸೂಚನೆ-ಬಸ್ ಪ್ರಯಾಣ...

ಉಡುಪಿ : ಖಾಸಗಿ ಬಸ್ ಗಳಲ್ಲಿ ಹಳೆ ದರವನ್ನೇ ಪಡೆಯಲು ಸಾರಿಗೆ ಇಲಾಖೆ ಸೂಚನೆ-ಬಸ್ ಪ್ರಯಾಣ ಇರಲಿ ಎಚ್ಚರ

ಉಡುಪಿ : ಉಡುಪಿಯ ಖಾಸಗಿ ಬಸ್ ಗಳು, ಎಕ್ಸ್ಪ್ರೆಸ್, ಶಟಲ್ ಬಸ್ ಗಳಲ್ಲಿ 2020ರ ಅ. 13 ಮತ್ತು 2021ರ ನ. 10 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಿಗದಿ ಪಡಿಸಿದ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು ಎಂದು ಜಿಲ್ಲೆಯ ಎಲ್ಲಾ ಬಸ್ ಮಾಲೀಕರಿಗೆ ಜಿಲ್ಲಾ ಪ್ರಾದೇಶಿಕ ಇಲಾಖೆ ಮಾಹಿತಿ ನೀಡಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮಜಲು ವಾಹನ ಪ್ರಯಾಣದ ದರವನ್ನು ಪರಿಷ್ಕರಿಸಿ ನಿಗದಿ ಪಡಿಸಿದ ದರವು ಜಾರಿಯಲ್ಲಿದ್ದರೂ ಕೆಲವು ಬಸ್ ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಪಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಸೂಚನೆ ಹೊರಡಿಸಲಾಗಿದೆ.

ಈ ಪ್ರಕಾರ ಖಾಸಗಿ ಬಸ್, ಶಟಲ್, ಎಕ್ಸ್ಪ್ರೆಸ್ ಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ದರ ಸ್ವೀಕರಿಸುವಂತಿಲ್ಲ, ಸ್ವೀಕರಿಸಿದರೆ ಸಾರ್ವಜನಿಕರಿಗೆ ತಿಳಿದರೆ ಮಾಹಿತಿ ನೀಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News