Friday, March 1, 2024
Homeಸುದ್ದಿ92-ಹೇರೂರು ಅಂಗನವಾಡಿ ಕೇಂದ್ರದಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

92-ಹೇರೂರು ಅಂಗನವಾಡಿ ಕೇಂದ್ರದಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಕಾಪು, ಆ.07: 92-ಹೇರೂರು ಅಂಗನವಾಡಿ ಕೇಂದ್ರದಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಇಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಜೂರ್ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ. ಶರ್ಮಿಳಾ ಆಚಾರ್ಯ ಅಧ್ಯಕ್ಷತೆ ವಹಿಸಿ ಇಂತಹ ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸುವುದರಿಂದ ತಾಯಂದಿರಿಗೆ ಉತ್ತಮ ಮಾಹಿತಿ ದೊರೆತು ಪ್ರಯೋಜನವಾಗಲಿದೆ ಎಂದರು.

ಈ ಕಾರ್ಯಕ್ರಮವನ್ನು ಮಜೂರು ಪಂಚಾಯತ್ ಹೇರೂರು ಗ್ರಾಮದ ಸದಸ್ಯರಾದ ವಿಜಯ್ ಧೀರಜ್ ಉದ್ಘಾಟಿಸಿ ಪ್ರಾಥಮಿಕ ಹಂತದಲ್ಲೇ ಬಿಟ್ಟು ಹೋದ, ತಪ್ಪಿ ಹೋದ, ಮಕ್ಕಳನ್ನು ಗುರುತಿಸಿ ಲಸಿಕೆ ಹಾಕುವಲ್ಲಿ ನಮ್ಮ ಆರೋಗ್ಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಹೇರೂರು ಪಂಚಾಯತ್ ಸದಸ್ಯರಾದ ಮಂಜುಳಾ ಗಣೇಶ್ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮನೆ ಮನೆಗಳಿಗೆ ಆರೋಗ್ಯ ಮಾಹಿತಿ ದೊರೆತು ಆರೋಗ್ಯವನ್ನು ಉತ್ತಮ ಪಡಿಸಲು ಸಾಧ್ಯವೆಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ BHEO ರವರಾದ ಶ್ರೀಮತಿ ಚಂದ್ರಕಲಾರವರು ಎದೆಹಾಲಿನ ಬಗ್ಗೆ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಪ್ರಸ್ತಾವಿಕ ಮಾತುಗಳನ್ನಾಡಿದರು.

ಶ್ರೀಮತಿ ಯಶೋಧ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಡಯಾನಾ ವಂದನಾರ್ಪಣೆಗೈದರು. ಅಂಗನವಾಡಿ ಕಾರ್ಯಕರ್ತೆ ಬಬಿತ, ಆಶಾಕಾರ್ಯಕರ್ತೆ ವಿನೋದ ಹಾಗೂ ಸಹಾಯಕಿ ಪವಿತ್ರ ಎಲ್ಲಾ ತಾಯಂದಿರು ಹಾಜರಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News