Saturday, July 27, 2024
Homeಸುದ್ದಿಕರಾವಳಿಕಾರ್ಕಳ ಕೆರ್ವಾಶೆಯಲ್ಲಿ ಅಕ್ರಮ ಗೋ ಸಾಗಾಟ ಭೇದಿಸಿದ ಬಜರಂಗದಳ

ಕಾರ್ಕಳ ಕೆರ್ವಾಶೆಯಲ್ಲಿ ಅಕ್ರಮ ಗೋ ಸಾಗಾಟ ಭೇದಿಸಿದ ಬಜರಂಗದಳ

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭಜರಂಗದಳದ ಕಾರ್ಯಕರ್ತರು ಬೇಧಿಸಿದ್ದಾರೆ.

ನಾಲ್ಕು ಜಾನುವಾರುಗಳನ್ನು ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ವಾಹನದಲ್ಲಿ ಕೈಕಾಲು ಕಟ್ಟಿ ಅಮಾನುಷ ರೀತಿಯಲ್ಲಿ ತುಂಬಿಸಿಕೊಂಡು ಕೆರ್ವಾಶೆಯಿಂದ ಬಜಗೋಳಿ ಕಡೆಗೆ ಸಾಗಾಟ ಮಾಡುತ್ತಿದ್ದ ಸಂದರ್ಭ ಅನುಮಾನಗೊಂಡ ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿದ್ದಾರೆ.

ಈ ವೇಳೆ ಭಯಭೀತರಾದ ದುಷ್ಕರ್ಮಿಗಳು ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಬಜಗೋಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News