Saturday, July 27, 2024
Homeಸುದ್ದಿಕರಾವಳಿಶಿರ್ವ: ರೈನ್'ಬೋ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ ಸಂಪನ್ನ!

ಶಿರ್ವ: ರೈನ್’ಬೋ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ ಸಂಪನ್ನ!

ಎಸ್ಸೆಸ್ಸೆಫ್ ಐವತ್ತರ ಸಂವತ್ಸರ ಪ್ರಯುಕ್ತ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸೆಪ್ಟೆಂಬರ್ 10 ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಗೋಲ್ಡನ್ ಫಿಫ್ಟಿ ಸಮಾವೇಶ ನಡೆಯಲಿದೆ. ಇದರ ಪ್ರಚಾರ ಅಂಗವಾಗಿ ಆಗಸ್ಟ್ 06 ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಎಸ್ಸೆಸ್ಸೆಫ್ ಶಿರ್ವ ಸೆಕ್ಟರ್ ವತಿಯಿಂದ ರೈನ್'ಬೋ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥ ಸೈಂಟ್ ಮೇರಿಸ್ ವೃತ್ತದಿಂದ ಹೊರಟು ಶಿರ್ವ ಪೇಟೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕರು ಇಬ್ರಾಹಿಂ ಮಜೂರ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಮುಸ್ತಫ ಸಖಾಫಿ, ಎಸ್ಸೆಸ್ಸೆಫ್ ಕಾಪು ಡಿವಿಷನ್ ವಿಸ್ಡಮ್ ಕಾರ್ಯದರ್ಶಿ ಅನ್ಫಾಲ್ ಉಚ್ಚಿಲ, ಶಿರ್ವ ಸೆಕ್ಟರ್ ಅಧ್ಯಕ್ಷರಾದ ತೌಫೀಕ್ ಪಕೀರ್ಣಕಟ್ಟೆ ಹಾಗೂ ಸೆಕ್ಟರ್ ವ್ಯಾಪ್ತಿಯ ರೈನ್’ಬೋ ವಿದ್ಯಾರ್ಥಿಗಳು, ಸೆಕ್ಟರ್ ಸಮಿತಿ ಸದಸ್ಯರು ಭಾಗವಹಿಸಿದ್ದರು,ಕಾರ್ಯಕ್ರಮದಲ್ಲಿ ಶಿರ್ವ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಝೀಯಾನ್ ಸಂದೇಶ ಭಾಷಣ ಮಾಡಿದರು, ರೈನ್”ಬೋ ಕಾರ್ಯದರ್ಶಿ ಸಫ್ವಾನ್ ಪಯ್ಯಾರು ಕಾರ್ಯಕ್ರಮದಲ್ಲಿ ಧನ್ಯವಾದ ಸಮರ್ಪಿಸಿದರು ಹಾಗೂ ಎಸ್ಸೆಸ್ಸೆಫ್ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News