ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ -ಆರೋಗ್ಯ ಕರ್ನಾಟಕ ಯೋಜನೆಯ ನೂತನ ಗುರುತಿನ ಚೀಟಿಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿಸೆಂಬರ್ 15 ರೊಳಗೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಯೋಜನೆಯಡಿ ಕಾರ್ಡ್ ವಿತರಣೆಯ ಮಧ್ಯಂತರ ಗುರಿಯಾಗಿ ಅ.2 ರೊಳಗೆ 1 ಕೋಟಿ ಗುರುತಿನ ಚೀಟಿ ಸಿದ್ದುಪಡಿಸಿ ವಿತರಿಸಲು ತೀರ್ಮಾನಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಸಾರ್ವಜನಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆಭರಣದಲ್ಲಿ ಗುರುತಿನ ಚೀಟಿ ಕೇಂದ್ರಗಳನ್ನು ಶೀಘ್ರವೇ ಸ್ಥಾಪಿಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
![](https://i0.wp.com/www.baravanige.com/wp-content/uploads/2022/09/n42492329416638112508743222d575f154f0c9f314fc322ae6778c14625e54522a66f9f2d220b1119e3b94-optimized.jpg?resize=696%2C298&ssl=1)