ಶಿರ್ವ: ಆ.06 (ನಾಳೆ) ರೈನ್’ ಬೋ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ

ಶಿರ್ವ, ಆ.05: ಎಸ್ಸೆಸ್ಸೆಫ್ ಐವತ್ತರ ಸಂವತ್ಸರ ಪ್ರಯುಕ್ತ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸೆಪ್ಟೆಂಬರ್ 10 ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಗೋಲ್ಡನ್ ಫಿಫ್ಟಿ ಸಮ್ಮೇಳನ ನಡೆಯಲಿದೆ.

ಇದರ ಪ್ರಚಾರದ ಅಂಗವಾಗಿ ಆಗಸ್ಟ್ 06 ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಎಸ್ಸೆಸ್ಸೆಫ್ ಶಿರ್ವ ಸೆಕ್ಟರ್ ವತಿಯಿಂದ ರೈನ್’ ಬೋ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ ಸೈಂಟ್ ಮೇರಿಸ್ ವೃತ್ತದಿಂದ ಹೊರಟು ಶಿರ್ವ ಪೇಟೆಯಲ್ಲಿ ಸಮಾಪ್ತಿಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಮುಸ್ತಫ ಸಖಾಫಿ, ಸುನ್ನೀ ಅಧ್ಯಾಪಕ ಒಕ್ಕೂಟ ಕಾಪು ರೇಂಜ್ ಅಧ್ಯಕ್ಷರಾದ ಅಬ್ದುರಝಾಖ್ ಖಾಸಿಮಿ, ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧ್ಯಕ್ಷರಾದ ಮುಹಮ್ಮದ್ ರಕೀಬ್, ಪ್ರಧಾನ ಕಾರ್ಯದರ್ಶಿ ಸಫ್ಘಾನ್ ಪಡುಬಿದ್ರಿ, ಶಿರ್ವ ಜಾಮಿಯ ಮಸ್ಟಿದ್ ಖತೀಬರಾದ ಸಿರಾಜುದ್ದೀನ್ ಝಿನಿ, ಶಿರ್ವ ಮಸ್ಟಿದ್ ಅಧ್ಯಕ್ಷರಾದ ಜುಬೇರ್ ಅಲಿ, ಎಸ್ಸೆಸ್ಸೆಫ್ ಕಾಪು ಡಿವಿಷನ್ ವಿಸ್ಟಮ್ ಕಾರ್ಯದರ್ಶಿ ಅನ್ಸಾಲ್ ಉಚ್ಚಿಲ, ಶಿರ್ವ ಸೆಕ್ಟರ್ ಅಧ್ಯಕ್ಷರಾದ ತೌಫೀಕ್ ಪಕೀರ್ಣಕಟ್ಟೆ ಹಾಗೂ ಸೆಕ್ಟರ್ ವ್ಯಾಪ್ತಿಯ ರೈನ್’ಬೋ ವಿದ್ಯಾರ್ಥಿಗಳು, ಸೆಕ್ಟರ್ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಎಂದು ಶಿರ್ವ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಝೀಯಾನ್ ಹಾಗೂ ರೈನ್’ಬೋ ಕಾರ್ಯದರ್ಶಿ ಸಫ್ವಾನ್ ಪಯ್ಯಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Scroll to Top