Saturday, July 27, 2024
Homeಸುದ್ದಿಉಡುಪಿ: ಪಾದಾಚಾರಿಗೆ ಲಾರಿ ಡಿಕ್ಕಿ! ಯುವಕ ಮೃತ್ಯು. ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರಶಾಂತ್

ಉಡುಪಿ: ಪಾದಾಚಾರಿಗೆ ಲಾರಿ ಡಿಕ್ಕಿ! ಯುವಕ ಮೃತ್ಯು. ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರಶಾಂತ್

ಉಡುಪಿ, ಆ.3: ಮನುಷ್ಯ ತಮಗೆ ನನ್ನವರಿಗೆ ಆಸ್ತಿ ಮಾಡೊದರಲ್ಲೆ ಆಯಸ್ಸು ಮರೆತು ಬಿಡುತ್ತಾನೆ. ಇನ್ನೂ ನೂರಾರು ಕಾಲ ಬದುಕಿ ಬಾಳಬೇಕು, ಸಾವಿರಾರು ಕನಸು ಕಾಣುತ್ತಿದ್ದ ಯುವಕನೊಬ್ಬ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾನೆ. ಆದ್ರೆ ಈ ಯುವಕ ಮಾತ್ರ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಬುಧವಾರ ಮದ್ಯಾಹ್ನ ಉದ್ಯಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಪಾದಚಾರಿ ಯುವಕನೋರ್ವನಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿಯಾಗಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.

ಈ ಸಾವು ನ್ಯಾಯವೇ ಎಂದು ಯುವಕನ ತಾಯಿ, ತಂಗಿ, ಸ್ನೇಹಿತರು ಬಂದು ಬಳಗ ಕಣ್ಣೀರು ಹಾಕುತ್ತಿದ್ದಾರೆ.

ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಯುವಕನ ಸಾವಿನ ಕ್ಷಣದವರೆಗೂ ಯುವಕನ ಸ್ನೇಹಿತರು ಹಾಗೂ ಸಮಾಜ ಸೇವಕಿ ಶ್ರೀಮತಿ ಗೀತಾಂಜಲಿ ಸುವರ್ಣ ಜೊತೆಗಿದ್ದು ಯುವಕನ ಪ್ರಾಣ ಉಳಿಸೋಕೆ ಪ್ರಯತ್ನ ಪಟ್ಟಿದ್ರು. ಆದರೆ ಪ್ರಯತ್ನ ಮಾತ್ರ ಫಲ ನೀಡಲಿಲ್ಲ. ವಿಧಿಯ ಕೂರ್ರ ಆಟಕ್ಕೆ ಪ್ರಶಾಂತ್ ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಸಾವನ್ನಪ್ಪಿರುವ ಪ್ರಶಾಂತ್‌ನ ಅಂಗಾಂಗ ದಾನಕ್ಕೆ ಕುಟುಂಬ ವರ್ಗ ಹಾಗೂ ಸ್ನೇಹಿತರು ನಿರ್ಧಾರ ಮಾಡಿದ್ರು. ಈ ಅಂಗಾಂಗ ದಾನದ ಹಿಂದೆ ಪ್ರಶಾಂತ ನ ಆಶೋತ್ತರವೂ ಇತ್ತು. ನಾನೇನಾದರೂ ಸತ್ತರೆ ನನ್ನ ಅಂಗಾಂಗ ದಾನ ಮಾಡಿ. ಒಂದಷ್ಟು ಜನರಿಗೆ ನನ್ನಿಂದ ಉಪಕಾರ ಆಗಲಿ ಎಂಬ ಆಸೆಯನ್ನು ತನ್ನ ಸ್ನೇಹಿತರ ಬಳಿ ಈ ಹಿಂದೆ ಹೇಳಿಕೊಂಡಿದ್ದನಂತೆ ಪ್ರಶಾಂತ್.

ಅದರಂತೆ ಪ್ರಶಾಂತ್ ಅಂಗಾಂಗಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆ ದಾನ ಮಾಡಲಾಗಿದೆ. ಪ್ರಶಾಂತನ ಕಣ್ಣು ಮಣಿಪಾಲ ಆಸ್ಪತ್ರೆಯ ಒಬ್ಬ ರೋಗಿಗೆ ಜೋಡಿಸಿದ್ದಾರೆ. ಕಿಡ್ನಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ.

ಮೃತ ಪ್ರಶಾಂತ್ ಮಲ್ಪೆಯ ತೊಟ್ಟಂ ಎಂಬಲ್ಲಿನ ನಿವಾಸಿಯಾಗಿದ್ದು, ತಾಯಿ ತಂಗಿ ಹಾಗೂ ಅಪಾರ ಬಂಧು ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮಲ್ಪೆಯ ದೇವಿ ಆಂಜನೇಯ ಭಜನಾ ಮಂಡಳಿಯ ಸದಸ್ಯನಾಗಿದ್ದು ಅಪಾರ ದೈವೀಕ ಭಕ್ತಿಯೊಂದಿಗೆ ಅದೇ ಮಂದಿರದ ಅರ್ಚಕನಾಗಿಯೂ ಸೇವೆ ಸಲ್ಲಿಸಿದ್ದಾನೆ.

ಮನೆಗೆ ಆಸರೆಯಾಗಿದ್ದ ಮಗ ಪ್ರಶಾಂತ್, ಮನೆಯ ಬೆಳಕು ಆರಿ ಹೋಗಿರುವ ದುಃಖದ ನಡುವೆಯೂ ತನ್ನ ಮಗ ಅಂಗಾಂಗ ದಾನ ಮಾಡುವ ಮೂಲಕ ಪರರ ಮನೆಯ ಬೆಳಕನ್ನು ಬೆಳಗಿಸುವ ಮಹತ್ಕಾರ್ಯದಲ್ಲಿ ಮುಂದಾಲೋಚನೆ ಮಾಡಿದ್ದಾನೆ ಎಂಬ ನೆಮ್ಮದಿ ಕಂಡುಕೊಳ್ಳುವುದರಲ್ಲಿ ಕುಟುಂಬ ಮುಂದಾಗಿದೆ.

ಮಗನ ಕಳೆದುಕೊಂಡ ಮಾತೃ ಹೃದಯ

ಎದೆಯ ಎತ್ತರಕ್ಕೆ ಬೆಳದು ನಿಂತ ಮಗ ಕಣ್ಣು ಮುಂದೆ ಇರದೆ ಹೋದ್ರೂ, ಎಲ್ಲೋ ಒಂದು ಇದ್ದಾನೆ ಎನ್ನುವ ಸಮಾಧಾನ ಪಡುವ ಜೊತೆಗೆ ಕತ್ತಲಿನ ಮನೆಗೆ ಬೆಳಕಾಗಿದ್ದಾನೆ ಎಂದು ತಾಯಿ ಹೃದಯ ಹಾಗೂ ಕುಟುಂಬಸ್ಥರು, ತಮಗೆ ತಾವೇ ಸಾಂತ್ವನ ಪಟ್ಟುಕೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News