ವೀಡಿಯೋ ಪ್ರಕರಣ; ಪೊಲೀಸ್ ಸರ್ಪಗಾವಲಲ್ಲಿ ಉಡುಪಿ

ಉಡುಪಿ, ಆ.03: ಖಾಸಗಿ ಪ್ಯಾರ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ನಡೆದ ವಿಡಿಯೋ ಪ್ರಕರಣವನ್ನು ಖಂಡಿಸಿ, ವಿಹಿಂಪ, ಭಜರಂಗದಳದ ನೇತೃತ್ವದಲ್ಲಿ ಇಂದು ಸಂಜೆ ಉಡುಪಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಗೆ ಬಿಗು ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

ಗುರುವಾರ ಬೆಳಗ್ಗೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಉಡುಪಿ ಎಸ್ಪಿ ಅಕ್ಷಯ್, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ್, ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳುವ ಜೋಡುಕಟ್ಟೆಗೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು‌.

2 ಹೆಚ್ಚುವರಿ ಎಸ್ಪಿ, 5 ಡಿವೈಎಸ್ಪಿ, 13 ಪೋಲಿಸ್ ಇನ್ಸ್ ಪೆಕ್ಟರ್, 50 ಸಬ್ ಇನ್ಸ್ ಪೆಕ್ಟರ್, 700 ಸಿಬ್ಬಂದಿ ಮತ್ತು ಅಧಿಕಾರಿಗಳು, 7 ಕೆ.ಎಸ್.ಆರ್.ಪಿ ತುಕಡಿ,
6 ಡಿಎಆರ್, 4 ಕ್ಯೂ ಆರ್ ಟಿ ತಂಡವನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಪೂರ್ವಭಾವಿಯಾಗಿ ಬೆಳಗ್ಗೆ ಟೌನ್ ಹಾಲ್ ನಲ್ಲಿ ಪೋಲಿಸ್ ಸಭೆ ಕೂಡ ನಡೆದಿದೆ. ನಗರದ ಪುರಭವನದಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯಾವುದೇ ಅಹಿತಕ ಘಟನೆಗಳಾದಂತೆ, ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಎಚ್ಚರವಹಿಸಬೇಕು. ಯಾವ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಹಿರಿಯ ಅಧಿಕಾರಿಗಳು ಸೂಚಿಸಿದರು.

You cannot copy content from Baravanige News

Scroll to Top