ರೈಲಿನಲ್ಲಿ ವಿದ್ಯಾರ್ಥಿನಿ ಎದುರು ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯ ವರ್ತನೆ; ವಿಕೃತ ಕಾಮುಕನ ಬಂಧನ..!!

ಕಾಸರಗೋಡು/ಕಣ್ಣೂರು, ಆ.2: ಕೇರಳದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಎದುರೇ ಹಸ್ತ ಮೈಥುನ ಮಾಡಿದ ಆರೋಪದ ಮೇಲೆ 51 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ 51 ವರ್ಷದ ಜಾರ್ಜ್ ಜೋಸೆಫ್ ಎಂಬಾತನಾಗಿದ್ದು, ಜುಲೈ 31 ರಂದು ಕೊಯಮತ್ತೂರು-ಮಂಗಳಾಪುರಂ ಇಂಟರ್ ಸಿಟಿ ಎಕ್ಸ್‌ಪ್ರೆಸ್ ಕಣ್ಣೂರು ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ದೂರುದಾರೆಯ ಪ್ರಕಾರ, ವ್ಯಕ್ತಿ ತನ್ನ ಸೀಟ್ ನ ಮುಂದೆ ಕುಳಿತಿದ್ದಾಗ ಆತನ ಖಾಸಗಿ ಅಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾನೆ. ವಿದ್ಯಾರ್ಥಿನಿ ವರ್ತನೆ ಖಂಡಿಸಿ ಆಕ್ರೋಶ ಹೊರ ಹಾಕಿದಾಗ ತನ್ನ ಸೀಟಿನಿಂದ ಬ್ಯಾಗ್ ಅಡ್ಡ ಹಿಡಿದು ವ್ಯಕ್ತಿ ಎದ್ದು ಹೋಗಿದ್ದಾನೆ. ವಿದ್ಯಾರ್ಥಿನಿ ಆತನ ಕೀಳು ವರ್ತನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ದೃಶ್ಯಗಳು ವೈರಲ್ ಆಗಿದ್ದು, ನಿನ್ನೆ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ನಂತರ ಘಟನೆ ಬೆಳಕಿಗೆ ಬಂದಿದೆ.

ರೈಲು ಕಾಸರಗೋಡು ನಿಲ್ದಾಣಕ್ಕೆ ಬಂದ ನಂತರ ವಿದ್ಯಾರ್ಥಿನಿಯ ದೂರಿನ ಮೇರೆಗೆ ಕಾಸರಗೋಡು ರೈಲ್ವೆ ಪೊಲೀಸರು ಜಾರ್ಜ್ ಜೋಸೆಫ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಂತರ ರೈಲು ಕಣ್ಣೂರಿನ ಮೂಲಕ ಹಾದು ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದ್ದರಿಂದ ಪ್ರಕರಣ ಮತ್ತು ಆರೋಪಿಯನ್ನು ಕಣ್ಣೂರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

You cannot copy content from Baravanige News

Scroll to Top