Sunday, April 21, 2024
Homeಸುದ್ದಿಅಲಿಯಾ ಇಲ್ಲಾಂದ್ರೆ ರಣಬೀರ್ ಸ್ನಾನ, ಊಟನೇ ಮಾಡಲ್ವಂತೆ; ಹೆಂಡ್ತಿ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ

ಅಲಿಯಾ ಇಲ್ಲಾಂದ್ರೆ ರಣಬೀರ್ ಸ್ನಾನ, ಊಟನೇ ಮಾಡಲ್ವಂತೆ; ಹೆಂಡ್ತಿ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ

ಬಾಲಿವುಡ್ ತಾರಾ ದಂಪತಿಗಳಾದ ಆಲಿಯಾ (Alia Bhatt) ಹಾಗೂ ರಣಬೀರ್ (Ranbir Kapoor) ಐದು ವರ್ಷಗಳ ಕಾಲ ಡೇಟಿಂಗ್ ನಡೆಸಿ ಏಪ್ರಿಲ್‌ನಲ್ಲಿ ವಿವಾಹಿತರಾದರು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ (Interview) ಇಬ್ಬರೂ ತಮ್ಮ ಅನುಬಂಧವನ್ನು ಕುರಿತು ಮುಕ್ತವಾಗಿ ಮಾತನಾಡಿದ್ದು ಪರಸ್ಪರ ತಾವಿಬ್ಬರೂ ಎಷ್ಟು ಹಚ್ಚಿಕೊಂಡಿದ್ದೇವೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

ಇಬ್ಬರೂ ಪ್ರಣಯ ಪಕ್ಷಿಗಳು ತಂದೆ ತಾಯಿಯಾಗುತ್ತಿರುವ ಖುಷಿಯಲ್ಲಿದ್ದರೆ ಇನ್ನೊಂದು ಕಡೆ ತಮ್ಮ ಚಿತ್ರ ಬ್ರಹ್ಮಾಸ್ತ್ರ ಭಾಗ 1 – ಶಿವ (Brahmastra Part 1 – Shiva) ಯಶಸ್ಸಿನ ನಾಗಾಲೋಟದತ್ತ ಓಡುತ್ತಿರುವುದು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ರಣಬೀರ್ ಕೂಡ ಅಮ್ಮನಾಗುತ್ತಿರುವ ಆಲಿಯಾರ ಕುರಿತು ಹೆಚ್ಚಿನ ಕಾಳಜಿ ವಹಿಸಿದ್ದು, ಚಿತ್ರದ ಪ್ರಮೋಶನ್ (Promotion) ವೇಳೆಯಲ್ಲಿ ಆಲಿಯಾರ ಪಕ್ಕದಲ್ಲಿಯೇ ಇರುತ್ತಾರೆ.ಸನಿಹ ಆಲಿಯಾ ಇರಬೇಕು ಎಂದ ರಣಬೀರ್ತಮ್ಮ ನಿಜಜೀವನದಲ್ಲಿ ಕೂಡ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಗಾಢವಾದ ಆಪ್ತತೆಯನ್ನು ದಂಪತಿಗಳು ಹೊಂದಿದ್ದು ರಣಬೀರ್ ಅಂತೂ ತಮ್ಮ ಪ್ರತಿ ಕೆಲಸಕ್ಕೂ ಆಲಿಯಾರ ಸಹಾಯ ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ರಣಬೀರ್ ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ಆಲಿಯಾರನ್ನು ಅವಲಂಬಿಸಿದ್ದೇನೆ ಎಂದೇ ತಿಳಿಸಿದ್ದಾರೆ.ಆಲಿಯಾ ಹಾಗೂ ರಣಬೀರ್ ಜೊತೆಯಾಗಿ ಇದೇ ಮೊದಲ ಬಾರಿಗೆ ಬ್ರಹ್ಮಾಸ್ತ್ರ ಚಿತ್ರದ ಭಾಗ ಒಂದು ಶಿವ ಇದರ ಇತ್ತೀಚಿನ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡುಬಂದಿದ್ದರು. ಇಬ್ಬರೂ ಪ್ರಣಯ ಪಕ್ಷಿಗಳು ಅಯಾನ್ ಮುಖರ್ಜಿಯವರ ಸೆಟ್‌ನಲ್ಲಿಯೇ ಮೊದಲು ಡೇಟಿಂಗ್ ಆರಂಭಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News