Saturday, July 27, 2024
Homeಸುದ್ದಿ300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ವಿಪ್ರೊ; ಕಾರಣ 'ಮೂನ್​ಲೈಟ್​'

300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ವಿಪ್ರೊ; ಕಾರಣ ‘ಮೂನ್​ಲೈಟ್​’

ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಕುರಿತು ಕಂಪನಿಯ ಚೇರ್ಮನ್ ರಿಷದ್ ಪ್ರೇಮ್​ಜಿ ಬುಧವಾರ ಮಾಹಿತಿ ಹೊರಗೆಡಹಿದ್ದಾರೆ.

ಆಲ್​ ಇಂಡಿಯಾ ಮ್ಯಾನೇಜ್​ಮೆಂಟ್ ಅಸೋಸಿಯೇಷನ್​ (ಎಐಎಂಎ) ಹಮ್ಮಿಕೊಂಡಿದ್ದ ನ್ಯಾಷನಲ್​ ಮ್ಯಾನೇಜ್​ಮೆಂಟ್​ ಕನ್ವೆನ್ಷನ್​ನಲ್ಲಿ ಮಾತನಾಡಿದ ರಿಷದ್ ಪ್ರೇಮ್​ಜಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮೂನ್​ಲೈಟ್​​’ನಲ್ಲಿ ತೊಡಗಿದ್ದ ಆರೋಪದ ಮೇಲೆ ಈ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಕೆಲವು ಉದ್ಯೋಗಿಗಳು ನಮ್ಮ ಪ್ರತಿಸ್ಪರ್ಧಿ ಕಂಪನಿಯಲ್ಲಿ ನೇರವಾಗಿ ಕೆಲಸ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ. ಕಳೆದ ಕೆಲವು ತಿಂಗಳಿನಿಂದ ಅಂಥ 300 ಉದ್ಯೋಗಿಗಳನ್ನು ಪತ್ತೆ ಮಾಡಲಾಗಿದ್ದು, ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಒಂದು ಸಂಸ್ಥೆಯಲ್ಲಿ ನಿಯಮಿತವಾಗಿ ಕೆಲಸ ಮಾಡುತ್ತ ಇನ್ನೊಂದು ಸಂಸ್ಥೆಯಲ್ಲೂ ಕೆಲಸ ಮಾಡುವುದು ವಂಚನೆ ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರೊನಾ ಸಮಯದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ವರ್ಕ್​ ಫ್ರಂ ಹೋಮ್​ ಪದ್ಧತಿಯನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ಐಟಿ ಕ್ಷೇತ್ರದಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬಂದಿತ್ತು. ಹೀಗೆ ಒಂದು ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದುಕೊಂಡೂ ಇನ್ನೊಂದು ಕಂಪನಿಗೂ ಕೆಲಸ ಮಾಡುವುದನ್ನು ‘ಮೂನ್​ಲೈಟ್​’ ಎಂದು ಹೇಳಲಾಗುತ್ತಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News