Saturday, July 27, 2024
Homeಸುದ್ದಿಕರಾವಳಿಸೈಡ್ ಕೊಡಲು ಹೋಗಿ ಪ್ರಪಾತಕ್ಕೆ ಬಿದ್ದ ಲಾರಿ…!!

ಸೈಡ್ ಕೊಡಲು ಹೋಗಿ ಪ್ರಪಾತಕ್ಕೆ ಬಿದ್ದ ಲಾರಿ…!!

ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಉಳ್ಳಾಲ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದೆ.

ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ.

ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಎದುರಿನ ಲಾರಿಗೆ ಸೈಡ್ ಕೊಡುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಲಾರಿಯನ್ನು ಕ್ರೇನ್ ಬಳಸಿ ಮೇಲೆಕ್ಕೆತ್ತಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News