Saturday, July 27, 2024
Homeಸುದ್ದಿ(ಸೆ. 25) ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಕುಮಾರ್ ಗೆ ಪದವು ಸ್ಪೋರ್ಟ್ಸ್...

(ಸೆ. 25) ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಕುಮಾರ್ ಗೆ ಪದವು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನೆ ಸಮಾರಂಭ

ಪದವು : ಪದವು ಸ್ಪೋರ್ಟ್ಸ್ ಕ್ಲಬ್ (ರಿ) ಶಿರ್ವ ವತಿಯಿಂದ ಪ್ರತಿಷ್ಠಿತ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕ್ಲಬ್ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಶಿರ್ವ ಪದವಿನ ಸಮಾಜ ಮಂದಿರದಲ್ಲಿ ಸೆ. 25 ರಂದು ನಡೆಯಲಿದೆ.

ಮಾಜಿ ಸಚಿವ, ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಸಭಾಧ್ಯಕ್ಷತೆ ವಹಿಸಲಿದ್ದು, ಶಿರ್ವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗ್ರೇಸಿ ಡಿಸೋಜ, ಸದಸ್ಯರಾದ ನವೀನ್ ಕುಮಾರ್, ಚಾವಡಿ ಮನೆ ನಂದಳಿಕೆ ಸುಹಾಸ್ ಹೆಗ್ಡೆ, ಶಿರ್ವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಶಿರ್ವ ಶ್ಯಾಮ್ ಸ್ಕ್ವೇರ್ ಸುಧೀರ್ ಶೆಟ್ಟಿ ಅಟ್ಟಿಂಜ, ಶಿರ್ವ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ರಾಜೇಶ್ ನಾಯ್ಕ್, ಶಬರಿ ಶಾಮಿಯಾನದ ರಾಜೇಶ್ ಶೆಟ್ಟಿ, ಶಿರ್ವ ಸುಪರ್ಣ ಕಲಾವಿದರು ತಂಡದ ನಿರ್ಮಾಪಕ ರಾಜೇಶ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪದವು ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷರು, ಅಧ್ಯಕ್ಷರು, ಸದಸ್ಯರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News