ಮಣಿಪಾಲ: ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ: ಲಕ್ಷಾಂತರ ರೂ ಮೌಲ್ಯದ ಗಾಂಜಾ ವಶಕ್ಕೆ..!!

ಉಡುಪಿ, ಜು.26: ಮಣಿಪಾಲದ ಸರಳೇಬೆಟ್ಟುವಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಶೇಖರಿಸಿ ಇಟ್ಟಿದ್ದ ಗಾಂಜಾವನ್ನು ಮಣಿಪಾಲ ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ.

ಪ್ರಕರಣದ ಸಂಬಂಧ ಗಾಂಜಾ ಪೆಡ್ಲರ್‌ಗಳಾದ ಬಿಹಾರ್‌ ಮೂಲದ ಆಯುಶ್‌ ರಾಜ್, ಆಂಧ್ರ ಪ್ರದೇಶ ಮೂಲದ ವಿನಯ್‌ ಕುಮಾರ್‌ ಸಿಂಗ್‌, ಉತ್ತರ ಪ್ರದೇಶ ಮೂಲದ ಮಯಾಸ್‌ ಚಂದೆಲ್ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 1 ಲಕ್ಷ 10 ಸಾವಿರ ಮೌಲ್ಯದ 2.ಕೆ.ಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ್ ಮಚಿಂದ್ರ ಹಾಕೆ ಐ.ಪಿ.ಎಸ್‌ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ಧಲಿಂಗಪ್ಪ ಟಿ, ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ ರವರ ಉಪಸ್ಥಿತಿಯಲ್ಲಿ ಮಣಿಪಾಲ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್ ಶ್ರೀ ದೇವರಾಜ್‌ ಟಿ.ವಿ ನೇತೃತ್ವದಲ್ಲಿ ಪಿಎಸ್‌ಐ ಅಬ್ದುಲ್‌ ಖಾದರ್ , ಅಬಕಾರಿ ಇಲಾಖೆಯ ಡಿ.ವೈ.ಎಸ್‌.ಪಿ ಅಶೋಕ್‌ ಹೆಚ್‌ ಹಾಗೂ ಮಣಿಪಾಲ ಠಾಣಾ ಸಿಬ್ಬಂದಿಗಾಳಾದ ಅಬ್ದುಲ್‌ ರಜಾಕ್‌, ಇಮ್ರಾನ್‌, ಚೆನ್ನೇಶ್‌, ಮಂಜುನಾಥ್‌ ಜೈನ್‌ ಹಾಗೂ ಆನಂದ ಹಾಗೂ ಎಸ್‌ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್‌ ರವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು ಎಂದು ಪೊಲೀಸ್‌ ಪ್ರಕಟನೆ ತಿಳಿಸಿದೆ

Scroll to Top