ಇತ್ತೀಚೆಗೆ ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ಹಿಂದೂ ಹುಡುಗಿಯರು ಶೌಚಾಲಯ ಬಳಸುವ ದೃಶ್ಯವನ್ನು ಮುಸ್ಲಿಮ್ ಸಹಪಾಠಿ ಹುಡುಗಿಯರು ಗೌಪ್ಯವಾಗಿ ಚಿತ್ರೀಕರಿಸಿ ವ್ಯವಸ್ಥಿತವಾಗಿ ಮುಸ್ಲಿಮ್ ಹುಡುಗರ ಜೊತೆ ಹಂಚಿಕೊಂಡಿರುವ ಮಾಹಿತಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಇದು ಕಾಲೇಜುಗಳಲ್ಲಿ ನಮ್ಮ ಹಿಂದೂ ಹುಡುಗಿಯರನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ವಿಡಿಯೋ ಮಾಡಿ ಬ್ಲಾಕ್ಮೇಲ್ ನಡೆಸಿ ಲವ್ ಜಿಹಾದ್ ಗೆ ಬಲಿಯಾಗಿಸುವ ಷಡ್ಯಂತ್ರದಂತೆ ಗೋಚರಿಸುತ್ತಿದೆ.
ಆದ್ದರಿಂದ ಈ ಘಟನೆಯ ಬಗ್ಗೆ ಸಮರ್ಪಕವಾಗಿ ತನಿಖೆ ನಡೆದು, ಇದರ ಹಿಂದೆ ಇರುವ ಷಡ್ಯಂತ್ರದ ಜಾಲ ಬಯಲಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗೆ ಉಡುಪಿ ಜಿಲ್ಲೆಯ ಎಲ್ಲಾ ಹಿಂದೂ ವಿದ್ಯಾರ್ಥಿನಿಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ತರಗತಿಗಳನ್ನು ಬಹಿಷ್ಕರಿಸಿ ಸರಕಾರವನ್ನು ಶೀಘ್ರ ನ್ಯಾಯಕ್ಕಾಗಿ ಒತ್ತಾಯಿಸುವಂತೆ ಹಿಂದೂ ಯುವ ಸೇನೆ ಉಡುಪಿ ಜಿಲ್ಲಾ ಅಧ್ಯಕ್ಷರಾದ ಅಜಿತ್ ಕುಮಾರ್ ಮನವಿ ಮಾಡಿದ್ದಾರೆ.