Wednesday, April 24, 2024
Homeಸುದ್ದಿನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಂಜೆ ಶಿವಾನಂದ ಪ್ರಭು ಮನೆಗೆ ಹಾನಿ; ಶಾಸಕ ಗುರ್ಮೆ ಸುರೇಶ್...

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಂಜೆ ಶಿವಾನಂದ ಪ್ರಭು ಮನೆಗೆ ಹಾನಿ; ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ, ಪರಿಶೀಲನೆ

ಉಡುಪಿ, ಜು.25: ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಾನಂದ ಪ್ರಭು ಅವರ ಮನೆಗೆ ಹಾನಿ ಉಂಟಾಗಿದ್ದು, ಇಂದು ದಿನಾಂಕ 25-07-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಮಾಲಿನಿ ಇನ್ನಂಜೆ, ಪಾಂಗಾಳ ಶಕ್ತಿ ಕೇಂದ್ರ ಸಂಚಾಲಕರಾದ ಪ್ರವೀಣ್ ಶೆಟ್ಟಿ, ಸಹ ಸಂಚಾಲಕರಾದ ದಿವೇಶ್ ಶೆಟ್ಟಿ, ಸ್ಥಳೀಯರಾದ ರವಿಪ್ರಸಾದ್, ಗಣೇಶ್ ಆಚಾರ್ಯ, ಮಹೇಶ್ ಪೂಜಾರಿ, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News