ಉಡುಪಿ, ಜು.24: ನಗರದ ಮಧ್ಯ ಭಾಗದಲ್ಲಿನ ಆಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಎದುರಾಗಿದೆ.

ನಗರದ ಆಭರಣ ತಯಾರಿಕಾ ಸಂಸ್ಥೆಯು ಚಿನ್ನಾಭರಣ ತಯಾರಿಸಿಲು ಹಳೆ ಚಿನ್ನ ಹಾಗೂ ಚಿನ್ನದ ಬಿಲ್ಲೆಗಳನ್ನು ಕರಗಿಸುವಾಗ ಸಲ್ಫರ್ ಉಪಯೋಗಿಸುತ್ತಿದ್ದು. ಇದರಿಂದ ಹೊರಸೂಸುವ ವಿಷಾನಿಲ ನಗರದೆಲ್ಲೆಡೆ ಹರಡಿದೆ.
ಈ ಹೊಗೆಯು ಬಹಳ ವಿಷಕಾರಿಯಾಗಿದ್ದು ನಗರ ಮಧ್ಯ ಭಾಗದಲ್ಲಿ ಈ ರೀತಿಯ ಹರಡುತ್ತಿದ್ದರೂ ನಗರ ಸಭಾ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

ಹಗಲು ಹೊತ್ತಿನಲ್ಲೂ ಇದೇ ರೀತಿಯ ವಿಷಯುಕ್ತ ಹೊಗೆ ಬಿಡುತ್ತಿದ್ದು, ಈ ಆಭರಣ ತಯಾರಿಕಾ ವರ್ಕ್ ಶಾಪ್ ಬಳಿಯೇ ಪ್ರಾಥಮಿಕ ಸರಕಾರಿ ಶಾಲೆ ಇದ್ದು ಶಾಲಾ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದ್ದು ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.