ನಂದಿನಿ ಹಾಲಿನ ದರ ಏರಿಕೆ- ಆ. 1 ರಿಂದ ಲೀಟರ್ ಹಾಲಿಗೆ 3 ರೂ. ಹೆಚ್ಚಳ

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಈ ಹೊಸ ದರವು ಆಗಸ್ಟ್‌ 1 ರಿಂದ ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿದರು. ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಕೆಎಂಎಫ್‌ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ.

ಹೆಚ್ಚುವರಿ ಹಣ ರೈತರಿಗೆ ತಲುಪುತ್ತೆ

ಈ ಬಗ್ಗೆ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಮಾತನಾಡಿ, ” ಸಿಎಂ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಆಗಸ್ಟ್ 1 ರಿಂದ ಪ್ರತಿ ಲೀಟರ್ ಗೆ 3 ರೂ. ದರ ಏರಿಕೆಯಾಗಲಿದೆ. ಈ ಬಗ್ಗೆ ಸಿಎಂ ನಿರ್ಧಾರ ಮಾಡಿದ್ದಾರೆ. ರೈತರು, ಒಕ್ಕೂಟದ ಬೇಡಿಕೆ 5 ರೂ ಇತ್ತು. 3 ರೂ ಏರಿಕೆಗೆ ಅಸ್ತು ಎನ್ನಲಾಗಿದೆ. ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದೆ. ದರ ಏರಿಕೆ ಹಣ ರೈತರಿಗೆ ತಲುಪಿಸುವ ವ್ಯವಸ್ಥೆ ಕೂಡ ಆಗಲಿದೆ ” ಎಂದು ತಿಳಿಸಿದರು.

ಮೊಸರು ಹಾಗೂ ಇತರೆ ಉತ್ಪನ್ನಗಳೂ ದರ ಹೆಚ್ಚಳ ಆಗುತ್ತಾ?

ಪ್ರಸ್ತುತ ಕೆಎಂಎಫ್‌ ಹಾಲಿನ ದರ ಹೆಚ್ಚಳದ ಬಗ್ಗೆ ಮಾತ್ರ ಪ್ರಸ್ತಾವನೆ ನೀಡಿತ್ತು. ಸಭೆಯ ಬಳಿಕವೂ ಎಲ್ಲಾ ಮಾದರಿಗಳ ಹಾಲು ದರ ಹೆಚ್ಚಳ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ತಿಳಿಸಿದ್ದಾರೆ. ಆದರೆ, ಮೊಸರು ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳ ದರ ಹೆಚ್ಚಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ, ಹಾಲು ಹೊರತು ಪಡಿಸಿ ಇತರೆ ಉತ್ಪನ್ನ ದರ ಹೆಚ್ಚಳ ಅನುಮಾನ ಎನ್ನಲಾಗಿದೆ.

Scroll to Top