ರಾಜ್ಯ ಸರ್ಕಾರ ಜನತೆಗೆ ಭರ್ಜರಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳಲ್ಲಿ ಕೆಲವೊಂದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಗ್ರಾಮ ಒನ್ ಕೇಂದ್ರಗಳ ಅಗತ್ಯವಿದೆ.
ಅದೇ ರೀತಿ ಗೃಹಲಕ್ಷ್ಮೀ ಯೋಜನೆಯು ಈಗಾಗಲೇ ಜಾರಿಗೊಂಡಿದ್ದು, ಈ ಯೋಜನೆಗೆ ಅರ್ಜಿ ಹಾಕಲು ಈಗಾಗಲೇ ಪ್ರಾರಂಭವಾಗಿದೆ. ಈ ಯೋಜನೆಗೆ ಅರ್ಜಿ ಹಾಕಲು ಅಥವಾ ಇತರ ಯಾವುದೇ ಡಿಜಿಟಲ್ ಕೆಲಸ ಕಾರ್ಯಗಳಿಗಾಗಿ ಉಡುಪಿ, ಶಿರ್ವ ಸುತ್ತಮುತ್ತಲಿನ ಜನತೆ “ಪ್ರಜ್ವಲ್ ಡಿಜಿಟಲ್” ಶಿರ್ವ (ಗ್ರಾಮ ಒನ್ ) ಅನ್ನು ಸಂಪರ್ಕಿಸಬಹುದಾಗಿದೆ.


ಗೃಹಲಕ್ಷ್ಮೀ ಯೋಜನೆಗೆ ಅರ್ಜಿ, ಆಧಾರ್ ತಿದ್ದುಪಡಿ, ಅಯುಷ್ಮಾನ್ ಹೆಲ್ತ್ ಕಾರ್ಡ್, ಪಾನ್ ಕಾರ್ಡ್ ಹೊಸತು / ತಿದ್ದುಪಡಿ ಹಾಗೂ ಇತರ ಡಿಜಿಟಲ್ ಕೆಲಸ ಕಾರ್ಯಗಳಿಗಾಗಿ ಶಿರ್ವ ಪಂಚಾಯತ್ ಮುಂಭಾಗದ “ಕಲ್ಪವೃಕ್ಷ” ಬಿಲ್ಡಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಪ್ರಜ್ವಲ್ ಡಿಜಿಟಲ್ ಗ್ರಾಮ ಒನ್” ಕೇಂದ್ರವನ್ನು ಸಂಪರ್ಕಿಸಿಬಹುದಾಗಿದೆ.

‘ಪ್ರಜ್ವಲ್ ಕುಲಾಲ್’ ರವರ ಮಾಲೀಕತ್ವದ ‘ಪ್ರಜ್ವಲ್ ಡಿಜಿಟಲ್ ಗ್ರಾಮ ಒನ್ ಕೇಂದ್ರ’ವು ಗ್ರಾಮ ಒನ್ ಕೇಂದ್ರ ಮೂಲಕ ಗ್ರಾಮೀಣ ಭಾಗದ ಜನರಿಗೆ ಅತ್ಯಧಿಕ ಸೇವೆಗಳನ್ನು ನೀಡಿ ಉಡುಪಿಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಿತಿ ವತಿಯಿಂದ ಪ್ರಶಂಸಾನ ಪತ್ರ ಕೂಡ ಪಡೆದಿದೆ.

ಅದೇ ರೀತಿ ಗ್ರಾಮೀಣ ಭಾಗದ ನಾಗರೀಕರಿಗೆ ಗ್ರಾಮ ಒನ್ ಯೋಜನೆಯಡಿ ನಿಗದಿತ ಸಮಯದಲ್ಲಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾಪು ತಾಲೂಕಿನಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದು, 74ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಶಂಸಾನ ಪತ್ರ ಕೂಡ ಪಡೆದಿದೆ.
2022-2023 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಅರ್ಜಿಗಳನ್ನು ಸಲ್ಲಿಸಿ ಪ್ರಥಮ ಸ್ಥಾನ ಪಡೆದ ಗ್ರಾಮ ಒನ್ ಕೇಂದ್ರ ಇದಾಗಿದೆ.
‘ಪ್ರಜ್ವಲ್ ಡಿಜಿಟಲ್ ಗ್ರಾಮ ಒನ್ ಕೇಂದ್ರ’ದಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದು, ಸಂಸ್ಥೆಗೆ ಆಗಮಿಸಲು ಲಿಫ್ಟ್ ವ್ಯವಸ್ಥೆ ಕೂಡ ಇದೆ.
ಗೃಹಲಕ್ಷ್ಮಿ ಯೋಜನೆಯ ಸರ್ವರ್ ಸಮಸ್ಯೆ ಗಳು ಕಳೆದ ದಿನಗಳಿಗಿಂತ ಕಡಿಮೆಯಾಗಿದ್ದು,ನೋಂದಣಿಯನ್ನು ಮಾಡಲು ಈಗ ಸಾಧ್ಯವಾಗುತ್ತಿದೆ.

ಗೃಹಲಕ್ಷ್ಮಿ ನೋಂದಣಿಯ ಮೆಸೇಜ್ ಬಂದಿದ್ದರು ಅಥವಾ ಬರದಿದ್ದರೂ ಸಹ ಯಾವುದೇ ಅರ್ಜಿಗಳನ್ನು ಶಿರ್ವ ಗ್ರಾಮ ಒನ್ ನಲ್ಲಿ ನೋಂದಣಿ ಮಾಡಲು ಅವಕಾಶವಿದೆ.
ಗೃಹಲಕ್ಷ್ಮಿ ಯೋಜನೆಗೆ
ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಮೊಬೈಲ್ ನಂಬರ್ ಅಗತ್ಯವಿದೆ.
ಹೆಚ್ಚಿನ ಯಾವುದೇ ಮಾಹಿತಿಗಾಗಿ ಪ್ರಜ್ವಲ್ 8970801349 ಸಂಪರ್ಕಿಸಬಹುದಾಗಿದೆ.
