ಬೆಂಗಳೂರಿನ ಕೆರೆಯಲ್ಲಿ  ಮೃತದೇಹವನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ

ಉಡುಪಿ: ಬೆಂಗಳೂರಿನ ಗಾಣಿಗರ ಹಳ್ಳಿಯ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದ ಸುಮಾರು (40) ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಅವರ ಶವವನ್ನು ಅಗ್ನಿಶಾಮಕದಳ, ಸ್ಥಳೀಯ ಈಜುಗಾರರು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.

ಬಳಿಕ ಬೆಂಗಳೂರಿನ ಪೋಲೀಸ್ ಅಧಿಕಾರಿಯವರು ಈ ವಿಷಯವನ್ನು ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿ ತಿಳಿಸುತ್ತಾರೆ.

ಮೊದಲೇ ಸರ್ವ ಸನ್ನದ್ದರಾಗಿರುವ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಜು.20ರ ರಾತ್ರಿ 8:00 ಗಂಟೆಯ ಹೊತ್ತಿಗೆ ಮಲ್ಪೆಯಿಂದ ಬೆಂಗಳೂರಿಗೆ ಆಂಬುಲೆನ್ಸ್ ಮೂಲಕ ತನ್ನ ಪ್ರಯಾಣವನ್ನು ಬೆಳೆಸಿತ್ತು.

ನಿನ್ನೆ ಮುಂಜಾನೆ 5:00 ಗಂಟೆಗೆ ಬೆಂಗಳೂರಿಗೆ ತೆರಳಿ, 7:00 ಗಂಟೆಗೆ ಮೃತದೇಹ ಹುಡುಕುವ ಕೆಲಸ ಆರಂಭವಾಗಿತ್ತು. ಸತತ 4:30 ಗಂಟೆಯ ಪರಿಶ್ರಮದಿಂದ 4 ಆಕ್ಸಿಜನ್ ಸಿಲಿಂಡರ್ ಬಳಸಿಕೊಂಡು 11:30 ಗಂಟೆಯ ಹೊತ್ತಿಗೆ ಮೃತದೇಹವನ್ನು ಮೇಲೆತ್ತಿದರು.

ಈ ಕಾರ್ಯಾಚರಣೆಯಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಜೊತೆಗೆ ಬುರ್ಹಾನ್ ಮಲ್ಪೆ, ದೀಪು ಮಲ್ಪೆ, ರಕ್ಷಿತ್ ಮಲ್ಪೆ ಭಾಗವಹಿಸಿದ್ದರು.

ಘಟನೆ ನಡೆದ ಸ್ಥಳದಲ್ಲಿ ನೆರೆದಿದ್ದ ಪೋಲೀಸ್ ಅಧಿಕಾರಿಗಳು, ಪೋಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈಶ್ವರ್ ಮಲ್ಪೆ ಮತ್ತು ತಂಡದ ಕೆಲಸವನ್ನು ಕಂಡು ಪ್ರಶಂಸಿಸಿದರು.

You cannot copy content from Baravanige News

Scroll to Top