ಇಬ್ಬರು ಮಹಿಳೆಯರ ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದ ಪ್ರಮುಖ ಆರೋಪಿಯ ಮನೆಗೆ ಬೆಂಕಿಯಿಟ್ಟು ಧ್ವಂಸ

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೋ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆರೋಪಿಗಳ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳುವಂತೆ ಇಡೀ ದೇಶ ಆಗ್ರಹಿಸುತ್ತಿದೆ. ಅದರಂತೆ ಮಣಿಪುರ ಪೊಲೀಸ್ ಅಧಿಕಾರಿಗಳು ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಲೇಟೆಸ್ಟ್ ವಿಷಯ ಏನಂದರೆ ಮಹಿಳೆಯರ ವಿವಸ್ತ್ರಗೊಳಿಸಿ ವಿಕೃತ ಮೆರೆದಿದ್ದ ಪ್ರಮುಖ ಆರೋಪಿ ಮನೆಗೆ ಬೆಂಕಿ ಇಡಲಾಗಿದೆ. ಮುಖ್ಯ ಆರೋಪಿ ಹುಯಿರೆಮ್ ಹೆರೋಡಾಸ್ ನಿವಾಸಕ್ಕೆ ಬೆಂಕಿ ಇಡಲಾಗಿದೆ. ಮನೆಗೆ ಬೆಂಕಿ ಇಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕೆಲವು ಮಹಿಳೆಯರು ನಿಂತಿರೋದನ್ನು ಗಮನಿಸಬಹುದಾಗಿದೆ.

ಮೇ 4 ರಂದು ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಸರಿಸುಮಾರು 800 ರಿಂದ 1000 ಮಂದಿ ಶಸ್ತ್ರಸಜ್ಜಿತವಾಗಿ ಬಂದು ಮಣಿಪುರದಲ್ಲಿ ಹಿಂಸಾಚಾರ ಮಾಡಿದ್ದರು. ಇವರು, AK ರೈಫಲ್ಸ್, ಎಸ್ಎಎಲ್ಆರ್ (SALR), ಐಎನ್ಎಸ್ಎಎಸ್ (INSAS) ಮತ್ತು 303 ರೈಫಲ್ಸ್ ಹಿಡಿದು ಗ್ರಾಮಗಳಿಗೆ ನುಗ್ಗಿದ್ದರು. ಗ್ರಾಮದಲ್ಲಿದ್ದ ಅಂಗಡಿ, ಮನೆ-ಮಠಗಳನ್ನು ಧ್ವಂಸ ಮಾಡಿ ಹಿಂಸಾಚಾರ ನಡೆಸಿದ್ದರು.

ಮೂವರನ್ನು ವಿವಸ್ತ್ರಗೊಳಿಸಿದ್ದರು

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿದ್ದ ಐವರನ್ನು ಅಪಹರಿಸಲಾಗಿತ್ತು. ಅವರಲ್ಲಿ ಮೂವರು ಮಹಿಳೆಯರು, ಇಬ್ಬರು ಪುರುಷರು ಅಪಹರಣಕ್ಕೆ ಒಳಗಾಗಿದ್ದರು. ಪೊಲೀಸ್ ಠಾಣೆಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ಕಾಡಿಗೆ ಅವರನ್ನು ಎಳೆದೊಯ್ದಿದ್ದರು. ಅಲ್ಲಿ ಅತ್ಯಾಚಾರಿಗಳ ತಂಡ ಮೊದಲು ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದೆ. ನಂತರ ಮೂವರು ಮಹಿಳೆಯರ ನಗ್ನಗೊಳಿಸಿದ್ದಾರೆ. ಅವರ ಎದುರಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆ ಸಹೋದರನ್ನೂ ಕೊಂದಿದ್ದಾರೆ. ಬಳಿಕ ಇಬ್ಬರು ಮಹಿಳೆಯರನ್ನು ಮೆರವಣಿಗೆ ಮಾಡಿದ್ದರು.

You cannot copy content from Baravanige News

Scroll to Top