Saturday, July 27, 2024
Homeಸುದ್ದಿಜನ್ಮ ಕೊಟ್ಟ ತಂದೆ ತಾಯಿಯನ್ನೇ ಕೊಲೆಗೈದ ಪಾಪಿ ಮಗ; ಮಂಗಳೂರು ಮೂಲದ ದಂಪತಿಯ ದುರಂತ ಅಂತ್ಯ..!!

ಜನ್ಮ ಕೊಟ್ಟ ತಂದೆ ತಾಯಿಯನ್ನೇ ಕೊಲೆಗೈದ ಪಾಪಿ ಮಗ; ಮಂಗಳೂರು ಮೂಲದ ದಂಪತಿಯ ದುರಂತ ಅಂತ್ಯ..!!

ಬೆಂಗಳೂರು, ಜು.19: ಕೋಟಿ ಜನ್ಮ ಎತ್ತಿ ಬಂದರೂ ತಂದೆ-ತಾಯಿ ಋಣ ತೀರಿಸೋಕೆ ಆಗಲ್ಲ ಎನ್ನುತ್ತೇವೆ. ಮಕ್ಕಳಿಗಾಗಿ ಪೋಷಕರು ಮಾಡೋ ತ್ಯಾಗ ಯಾವುದಕ್ಕೂ ಸರಿ ಸಾಟಿ ಅಲ್ಲ. ಹೀಗಿರುವಾಗ ಇಲ್ಲೋರ್ವ ತಂದೆ ತಾಯಿ ಋಣ ತೀರಿಸೋದಿರಲಿ ಭೂಮಿ ಮೇಲೆಯೇ ಇರೋಕೆ ಬಿಟ್ಟಿಲ್ಲ. ಜನ್ಮ ಕೊಟ್ಟ ಪೋಷಕರನ್ನೇ ಕೊಲೆಗೈದ ಪಾಪಿ ಇವನು!

ಇಡೀ ಜಗತ್ತಿನಲ್ಲಿ ಮಕ್ಕಳ ಸಂತೋಷಕ್ಕಾಗಿ ತಂದೆ-ತಾಯಿ ತಮ್ಮ ಜೀವವನ್ನೇ ಚಪ್ಪಲಿ ಹಾಗೇ ಸವೆಸುತ್ತಾರೆ. ತಮಗೆ ಕಷ್ಟ ಬಂದ್ರೂ ಪರವಾಗಿಲ್ಲ. ನಾವು ಪಟ್ಟ ಕಷ್ಟ ಮಕ್ಕಳು ಪಡಬಾರದು ಎಂದು ತಮ್ಮ ಸಂತೋಷವನ್ನೇ ಧಾರೆ ಎರೆಯುತ್ತಾರೆ. ಆದರೆ, ಪಾಪಿ ಮಗನೋರ್ವ ಜೀವ ಕೊಟ್ಟ ತಂದೆ-ತಾಯಿಯನ್ನ ಭೀಕರವಾಗಿ ಕೊಂದ ಘಟನೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

60 ವರ್ಷದ ಶಾಂತ ಹಾಗೂ 62 ವರ್ಷದ ತಂದೆ ಭಾಸ್ಕರ್ ಕೊಲೆಯಾದ ದುರ್ದೈವಿಗಳು. ತಾಯಿ ರಿರ್ಟೈರ್ಡ್ ಸೆಂಟ್ರಲ್ ಗಾರ್ಮೆಂಟ್ ಎಂಪ್ಲಾಯ್ ಆಗಿದ್ರೆ, ಭಾಸ್ಕರ್ ಅವ್ರು ಹೊಟೇಲ್‌ವೊಂದಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿದ್ರು. ಮನೆಯಲ್ಲಿ ಆಗಾಗ ಕುಡಿದು ಗಲಾಟೆ ಮಾಡ್ತಿದ್ದ ಆರೋಪಿ ಶರತ್ ರಾಡ್‌ನಿಂದ ಹತ್ಯೆಗೈದು ಮನೆ ಲಾಕ್ ಮಾಡಿ ಪರಾರಿಯಾಗಿದ್ದಾನೆ.

ಕೊಲೆಯಾದ ದಂಪತಿ ಮೂಲತಃ ಮಂಗಳೂರಿನವರು. 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಮೃತ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪುತ್ರ ಶರತ್ ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದ. ಅಲ್ದೇ ಆರೋಪಿ ಶರತ್ ಯಾವುದೇ ಕೆಲಸ ಸಹ ಮಾಡುತ್ತಿರಲಿಲ್ಲ. ಇತ್ತೀಚೆಗೆ ಮನೆಯಿಂದ ಮತ್ತೊಬ್ಬ ಮಗ ಹೊರಹೋಗಿದ್ದ. ಇಂದು ಬೆಳಗ್ಗೆ ತಂದೆ-ತಾಯಿ ಪುತ್ರ ಶರತ್‌ ರಾಡ್‌ನಿಂದ ಕೊಲೆಗೈದಿದ್ದಾನೆ. ಮತ್ತೊಬ್ಬ ಮಗ ಫೋನ್‌ ಮಾಡಿದಾಗ ಪೋಷಕರು ರಿಸೀವ್ ಮಾಡಿಲ್ಲ. ನಂತ್ರ ಮನೆಯಲ್ಲಿ ಪರಿಶೀಲಿಸಿದಾಗ ಕೊಲೆಯಾಗಿದ್ದು ಬೆಳಕಿಗೆ ಬಂದಿದೆ.

ಇನ್ನು, ಅಕ್ಕಪಕ್ಕದ ಮನೆಯವ್ರು ಮನೆಯಲ್ಲಿ ಯಾವಾಗಲೂ ಮಗ ಮತ್ತು ತಂದೆ-ತಾಯಿ ನಡುವೆ ಗಲಾಟೆ ಆಗ್ತಿತ್ತು. ದೊಡ್ಡ ಮಗ ಬೇರೆ ಮನೆಯಲ್ಲಿ ವಾಸವಾಗಿದ್ದ. ಅವ್ರು ಬೆಳಗ್ಗೆ ಬಂದು ನೋಡಿದಾಗ ಕೊಲೆ ವಿಚಾರ ಗೊತ್ತಾಗಿದೆ ಎಂದ್ರು.

ಡಬಲ್ ಮರ್ಡರ್ ಆಗಿದೆ ಎಂದು ಗೊತ್ತಾಗ್ತಿದ್ದಂತೆ, ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮೊದಲ ಮಗ ದೂರು ನೀಡಿದ್ದಾರೆ. ಎರಡನೇ ಮಗ ಶರತ್ ಪರಾರಿಯಾಗಿದ್ದು, ಹುಡುಕಾಟ ನಡೆಸ್ತಿದ್ದೇವೆ ಎಂದು ತಿಳಿಸಿದ್ರು.

ಅದೇನೇ ಇರಲೀ! ಮನೆ ಅಂದ್‌ ಮೇಲೆ ಒಂದು ಮಾತು ಬರುತ್ತೆ ಹೋಗುತ್ತೇ. ಮಕ್ಕಳಿಗಾಗಿ ಎಲ್ಲ ನಮಗಾಗಿ ಏನು ಬೇಡ ಎಂದವರು ಮಗನಿಂದಲೇ ಕೊಲೆಯಾದದ್ದು ದುರಂತ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News