ಕೇರಳದಿಂದ ಮಣಿಪಾಲಕ್ಕೆ ಬಂದ ಪದವೀಧರೆ ಯುವತಿಯ ರಕ್ಷಣೆ; ವಿಶು ಶೆಟ್ಟಿ ಅವರಿಂದ ಬಾಳಿಗಾ ಆಸ್ಪತ್ರೆಗೆ ದಾಖಲು

ಉಡುಪಿ, ಜು.18: ಉನ್ನತ ಪದವೀಧರೆ ಯುವತಿಯೋರ್ವಳು ಮಾನಸಿಕ ಅಸ್ವಸ್ಥೆಗೆ ಗುರಿಯಾಗಿ ಕೇರಳದಿಂದ ಮಣಿಪಾಲಕ್ಕೆ ಬಂದಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರು ಮಣಿಪಾಲ ಪೊಲೀಸರ ಸಹಾಯದಿಂದ ಯುವತಿಯನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ಗುರುವಾರ ದಾಖಲಿಸಿದ್ದಾರೆ.

ಯುವತಿ ದಾಖಲಾತಿ ಸಂದರ್ಭದಲ್ಲಿ ತನ್ನ ಹೆಸರು ಆಯೆಷಾ ಬಾನು (30), ತಂದೆ ಅಬ್ದುಲ್ ಕರೀಂ, ಕೇರಳದ ಅಲೆಪ್ಪಿ ನಿವಾಸಿ ಎಂಬ ಮಾಹಿತಿ ನೀಡಿದ್ದಾಳೆ.
ಯಾವುದೋ ಕಾರಣಕ್ಕೆ ಈಕೆ ಮಣಿಪಾಲಕ್ಕೆ ಬಂದಿದ್ದು, ತೀರಾ ಮಾನಸಿಕ ಅಸ್ವಸ್ಥೆಗೆ ಒಳಗಾದಂತೆ ಕಂಡು ಬಂದಿದ್ದು ಹಾಗೂ ಈಕೆಯ ದೃಷ್ಟಿಯಲ್ಲಿ ಕೂಡ ದೋಷವಿರುವ ಬಗ್ಗೆ ವೈದ್ಯರಿಂದ ಮಾಹಿತಿ ಬಂದಿದ್ದು ಈಕೆಯ ಸಂಬಂಧಿಕರು ಯಾರು ಪತ್ತೆಯಾಗದ ಕಾರಣ ಮಹಿಳಾ ಪರ ಇಲಾಖೆ ಸಹಕರಿಸಬೇಕಾಗಿ ವಿಶು ಶೆಟ್ಟಿಯವರು ಕೇಳಿಕೊಂಡಿದ್ದಾರೆ. ಪೊಲೀಸರ ಸಹಾಯದಿಂದ ರಕ್ಷಣಾ ಸಂದರ್ಭದಲ್ಲಿ ಈಕೆ ತೀವ್ರ ಪ್ರತಿರೋಧ ತೋರಿದ ಕಾರಣ ಹರಸಾಹಸ ಪಡಬೇಕಾಯಿತು.
ಮಣಿಪಾಲ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಜ್ಯೋತಿನಾಯಕ್ ಹಾಗೂ ಎಎಸ್‌ಐ ಗಂಗಪ್ಪ ಕಾರ್ಯಾಚರಣೆಯಲ್ಲಿ ನೆರವಾದರು.

ಯುವತಿಯ ಸಂಬಂಧಿಕರು ಮಣಿಪಾಲ ಠಾಣೆ ಅಥವಾ ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.


You cannot copy content from Baravanige News

Scroll to Top