Sunday, September 8, 2024
Homeಸುದ್ದಿಬರವಣಿಗೆ ವರದಿ ಫಲಶ್ರುತಿ: ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆ - ರಿಕ್ಷಾ ಮಾಲಕರು ಹಾಗೂ...

ಬರವಣಿಗೆ ವರದಿ ಫಲಶ್ರುತಿ: ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆ – ರಿಕ್ಷಾ ಮಾಲಕರು ಹಾಗೂ ಚಾಲಕರ ಸಂಘ ಹಾಗೂ ಸ್ಥಳೀಯರಿಂದ ರಸ್ತೆ ದುರಸ್ಥಿ ಕಾರ್ಯ!; ಇನ್ನಾದರೂ ಎಚ್ಚೆತ್ತು ಕೊಳ್ಳುವುದೇ ಇಲಾಖೆ..!!??

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿನ ರಸ್ತೆಯ ಹೊಂಡಗಳನ್ನು ರಿಕ್ಷಾ ಮಾಲಕರು ಹಾಗೂ ಚಾಲಕರು (ರಿ.) ಬಂಟಕಲ್ಲು ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದಿಂದ ಕಾಂಕ್ರೀಟು ಹಾಕಿ ಮುಚ್ಚಲಾಯಿತು.

ರಸ್ತೆ ಹದಗೆಟ್ಟು ವರುಷಗಳು ಕಳೆದರೂ ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ.

ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ನಡೆಯುತ್ತಿದ್ದು, ಮಳೆಗಾಲದಲ್ಲಿ ಅಪಘಾತದ ಪ್ರಮಾಣ ಇನ್ನೂ ಜಾಸ್ತಿಯಾಗಿದೆ. ರಸ್ತೆ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಇದರ ಅರಿವಿಲ್ಲದ ಸವಾರರು ಅಪಘಾತಗಳನ್ನು ಎದುರಿಸಬೇಕಾಗಿತ್ತು.

ಇದರ ತೀವ್ರತೆಯನ್ನು ಅರಿತು ಈ ರಸ್ತೆಯ ಬಗ್ಗೆ ಬರವಣಿಗೆ ನ್ಯೂಸ್ ವಿಸ್ತಾರವಾಗಿ ವರದಿ ಮಾಡಿತ್ತು.

ಇದಕ್ಕೆ ತಕ್ಷಣ ಸ್ಪಂದಿಸಿದ ರಿಕ್ಷಾ ಚಾಲಕ ಮಾಲಕರ ಹಾಗೂ ಚಾಲಕರ ಸಂಘ (ರಿ.) ಬಂಟಕಲ್ಲು ಹಾಗೂ ಸ್ಥಳೀಯ ಸಂಘಟನೆಗಳು ಇಂದು ಬೆಳಗ್ಗೆ ಗುಂಡಿಗಳನ್ನು ಕಾಂಕ್ರಿಟ್ ನಿಂದ ಮುಚ್ಚಿದ್ದಾರೆ. ಇವರ ಈ ಕೆಲಸಕ್ಕೆ ಸ್ಥಳೀಯ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಈ ರಸ್ತೆಗೆ ಉತ್ತಮ ಗುಣಮಟ್ಟದ ಡಾಮರೀಕರಣ ಮಾಡಿ ಮುಂದೆ ಆಗುವ ಅಪಘಾತಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News